ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿ ಮುಖಂಡರ ನೇಮಕಾತಿಯನ್ನು ಮುಂದಿನ 15 ದಿನದಲ್ಲಿ ರದ್ದಾಗಬೇಕು, ಕಾಂಗ್ರೆಸ್ ಕಾರ್ಯಕರ್ತರ ಅಮಾನತು, ಉಚ್ಚಾಟನೆ ಎಲ್ಲಾ ಗೊಂದಲಗಳಿಗೆ ತಾರ್ಕಿಕ ಅಂತ್ಯ ಹಾಡಬೇಕು ಎಲ್ಲಾ ಕಾರ್ಯಕರ್ತರನ್ನು ಸಮಾನಾಗಿ ಪರಿಗಣಿಸಬೇಕು. ಮುಂದೆ ನೇಮಕ ವಾಗಲಿರುವ ವಿವಿಧ ಸಮಿತಿಗಳಿಗೆ ನೇಮಕಾತಿ ಸಂದರ್ಭದಲ್ಲಿ ಆಯಾ ಗ್ರಾಮದ ಪ್ರಮುಖರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಎಂವಿಜಿ ಒತ್ತಾಯಿಸಿದರು. ಕಾಂಗ್ರೆಸ್‌ನಲ್ಲಿ ಚುಣಾವಣೆ ಪೂರ್ವ ಮತ್ತು ನಂತರದ ದಿನಗಳಲ್ಲಿ ಉಂಟಾಗಿರುವ ಬೆಳವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಉಳಿಸಿ ಅಭಿಯಾನ ಆರಂಭಿಸಿದ್ದು ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ , ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ ಮತನಾಡಿ ಕಾಂಗ್ರೆಸ್ ಸರಕಾರ ಇರುವಾಗ ಬಿಜೆಪಿಗರು ಅಕ್ರಮ ಸಕ್ರಮ ಸದಸ್ಯರಾಗುವುದಕ್ಕಿಂತ ದೊಡ್ಡ ಮುಜುಗರ ಪಕ್ಷಕ್ಕೆ ಬೇರೆ ಇಲ್ಲಾ ಇದು ಹೀಗೆ ಮುಂದುವರಿದರೆ ಎಲ್ಲಾ ಸಮಿತಿಗಳಿಗೆ ಮುಂದಿನದಿನಗಳಲ್ಲಿ ಬಿಜೆಪಿಗರೇ ನೇಮಕ ಆಗುವ ಸಾಧ್ಯತೆ ಇದೆ. ಆದುದರಿಂದ ಬಿಜೆಪಿಗರ ನೇಮಕಾತಿ ಕೂಡಲೇ ರದ್ದಾಗಬೇಕು ಮತ್ತು ವಿವಿಧ ಸಮಿತಿಗಳಿಗೆ ನೇಮಕಕ್ಕೆ ಶಿಫಾರಸ್ಸು ಮಾಡುವ ಸಂದರ್ಭದಲ್ಲಿ ಅಯಾ ಗ್ರಾಮ ಸಮಿತಿಯ ಪದಾಧಿಕಾರಿಗಳ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಾನು ಯಾವುದೇ ತಪ್ಪು ಮಾಡದಿದ್ದರೂ, ಪಕ್ಷಕ್ಕಾಗಿ ನಿರಂತರ ದುಡಿಯುತ್ತಿದ್ದರೂ ಪಕ್ಷದಿಂದ ನನಗೆ ಶೋಕಾಸ್ ನೋಟೀಸ್ ನೀಡಿರುವುದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಅಮಾನತು, ಉಚ್ಚಾಟನೆ ಮಾಡಿರುವುದು ತನಗೆ ಅತ್ಯಂತ ನೋವು ತಂದಿದೆ ಎಂದು ವೆಂಕಪ್ಪ ಗೌಡರು ಭಾವುಕರಾಗಿ ನುಡಿದರು. ಶೋಕಾಸ್ ನೋಟಿಸ್ ವಿಷಯ ಮಾತನಾಡಿದಾಗ ಗದ್ಗದಿತರಾದ ಅವರು ಶೋಕಾಸ್ ಅಮಾನತು ವಿಚಾರವನ್ನು ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಾಗ ಶೋಕಾಸ್, ಅಮಾನತು, ಉಚ್ಚಾಟನೆಯನ್ನು ಕೂಡಲೇ ಹಿಂಪಡೆಯಲು ಅವರು ಸೂಚಿಸಿದ್ದು ನಾವು ನೀಡಿದ ಪತ್ರದಲ್ಲಿ ಅವರು ಎಲ್ಲವನ್ನು ತಡೆಹಿಡಿದು ಸಹಿಹಾಕಿದ್ದಾರೆ ಆದುದರಿಂದ ಆ ವಿಚಾರ ಇಲ್ಲಿಗೆ ಕೊನೆಯಾಗಬೇಕು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಸೇರಿಸಬೇಕು ಎಂದು ಅವರು ಹೇಳಿದರು ಅಲ್ಲದೇ ತಮ್ಮ ಮಾತು ಮುಂದುವರೆಸಿ ನಾನು ಅಧ್ಯಕ್ಷನಾಗಿರುವ ಸಂದರ್ಭದಲ್ಲಿ ಸಚಿವರಾಗಿದ್ದ ಡಿಕೆಶಿ ನೇತ್ರತ್ವದಲ್ಲಿ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿದ ಹಿನ್ನಲೆಯಲ್ಲಿ ನನ್ನ ವಿರುದ್ದ ಅಂದಿನ ಶಾಸಕರಾದ ಎಸ್ ಅಂಗಾರರವರು ಹಕ್ಕು ಚ್ಯುತಿ ಮಂಡಿಸಿದ್ದರು ಅಲ್ಲದೇ ೧೧೦ ಕೆವಿ ವಿಚಾರದಲ್ಲಿ ಪತ್ರವನ್ನು ನಿಡಿದ್ದರು ಮಾಡಬಾರದು ಎಂದು ಆಗ ಯಾಕೆ ಈ ಬಿಜೆಪಿ ಪ್ರತಿಭಟನೆ ಮಾಡಿಲ್ಲಾ ಎಂದು ಪ್ರಶ್ನಿಸಿದರು.
ಇದೀಗ ಕಾಂಗ್ರೆಸ್ ಉಪಗ್ರಹದ ಸಂಪರ್ಕ ಕಳಚಿದೆ ಎಂದು ಹೇಳುವ ನೀವು ಚೈತ್ರ ಕುಂದಾಪುರ ಟಿಕೆಟ್ ಕೊಡಿಸು ಭರವಸೆ ನೀಡಿ ವಂಚನೆ ಭ್ರಷ್ಟಾಚಾರ ಬಯಲಾದಗ ನಮಗು ಅವರಿಗು ಸಂಭದವಿಲ್ಲಾ ಎಂದು ಹೇಳಿ ಸಂಪರ್ಕವನ್ನು ಕಡಿದು ಕೊಂಡಿರುವುದು ನೀವೇ ಎಂದು ಬಿಜೆಪಿ ವಿರುದ್ದ ಕಿಡಿ ಕಾರಿದರು.
ಉಚ್ಚಾಟನೆಗೊಳಗಾದ ಕಾರ್ಯಕರ್ತ
ರವೀಂದ್ರ ರುದ್ರಪಾದ ಮಾತನಾಡಿ ಉಚ್ಛಾಟನೆಗೆ ಏನು ಮಾನದಂಡ ಎಂಬುದನ್ನು ಬ್ಲಾಕ್ ಸ್ಪಷ್ಟಪಡಿಸಬೇಕು. ನಮ್ಮ ಉಚ್ಚಾಟನೆಯನ್ನು ಹೇಳಿಕೊಂಡು ನಮ್ಮ ಮರಿಯಾದೆಗಳನ್ನು ತೆಗೆದಿದ್ದಾರೆ ಯಾವ ರೀತಿಯಲ್ಲಿ ಮಾಧ್ಯಮಗಳಿಗೆ ಉಚ್ಚಾಟನೆ ಮಾಡಲಾಗಿದೆ ಎಂದು ಹೇಳಿದ್ದೀರೋ ಅದೇ ರೀತಿಯಲ್ಲಿ ಆದೇ ರೀತಿಯಲ್ಲಿ ಆದೇಶ ಹಿಂಪಡೆದು ಅದನ್ನು ಮಾಧ್ಯಮಗಳ ಮೂಲಕ ಪ್ರಕಟಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿ ದುಡಿಯುವುದು ಎಂದು ಹೇಳಿದರು.
ಪರಶುರಾಮ ಚಿಲ್ತಡ್ಕ ಮಾತನಾಡಿ’ ನನ್ನ ತಂದೆಯವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ನಾನು ಕೃಷಿ ಜೊತೆಗೆ ಪಕ್ಷದ ಕೆಲಸಗಳನ್ನು ಮಾಡುತ್ತಿದ್ದು ಕೆಲವೊಂದು ಗ್ರಾಮಗಳಲ್ಲಿ ಬೂತ್‌ಗಳಲ್ಲಿ ಕುಳಿತುಕೊಳ್ಳಲು ಕಾರ್ಯಕರ್ತರೆ ಇಲ್ಲದೇ ಇರುವ ಪರಿಸ್ಥಿತಿ ನಿರ್ಮಾಣವಾಗಿರುವಾಗ ಕಾರ್ಯಕರ್ತರನ್ನು ಅಮಾನತು, ಉಚ್ಚಾಟನೆ ಮಾಡುವುದು ಎಷ್ಟು ಸರಿ ಎಂದು ನಾಯಕರು ಇದನ್ನು ಅವಲೋಕನೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಶಶಿಧರ ಎಂ.ಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಈ ಸಭೆಯಲ್ಲಿ ಸುಳ್ಯ ತಾಲೂಕಿನ ನಾನಾ ಭಾಗಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
.
.