Ad Widget

ಕೆಲಸಕ್ಕೆ ಹೋಗುವ ವಿಚಾರದಲ್ಲಿ ಅಜ್ಜಾವರದ ಯುವಕನ ಮೇಲೆ ಹಲ್ಲೆ – ಜಾತಿನಿಂದನೆ ಆರೋಪ- ಪ್ರಕರಣ ದಾಖಲು

ಅಜ್ಜಾವರ ಗ್ರಾಮದ, ಶಿವರಾಜ್ ಎಂ, ಬಿ ಎಂಬವರು ತನಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಬೆಳ್ಳಾರೆ ಠಾಣೆಗೆ ದೂರು ಸಲ್ಲಿಸಿರುವ ವಿಚಾರ ತಿಳಿದು ಬಂದಿದೆ. ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ದೂರಿನಂ 17.9.2023 ರಂದು ಸಂಜೆ ಬೆಳ್ಳಾರೆ ಗ್ರಾಮದ ಕೊಳಂಬಳ ಅಕ್ಕಿ ಮಿಲ್ಲ್ ಎದುರು ಡಾಮಾರು ರಸ್ತೆಯಲ್ಲಿ ಹೋಗುತ್ತಿದ್ದಾಗ, ನೆಟ್ಟಾರು ಕಡೆಯಿಂದ ಕಾರೊಂದರಲ್ಲಿ ಬಂದ ಆರೋಪಿಗಳಾದ ಹಕೀಂ, ಅತ್ತಾವುಲ್ಲ , ರಫೀಕ್ ಅಜ್ಜಾವರ ಮತ್ತು ಆಶೀರ್ ಎಂಬವರುಗಳು ಶಿವರಾಜ್ ಎಂ.ಬಿ ಎಂಬುವವರನ್ನು ಅಡ್ಡಗಟ್ಟಿ, ಜಮಾಲುದ್ದೀನ್ ಎಂಬವರೊಂದಿಗೆ ಕೆಲಸಕ್ಕೆ ಹೋಗುತ್ತಿಯಾ ಅಲ್ಲವೇ ಎಂದು ತಕರಾರು ತೆಗೆದು ಹಲ್ಲೆ ನಡೆಸಿರುತ್ತಾರೆ ಅಲ್ಲದೇ ಜಾತಿನಿಂದನೆ ಮಾಡಿ ಜೀವಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಶಿವರಾಜ್ ಎಂ.ಬಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆರುತ್ತಿರುವುದಾಗಿ ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 63/2023 ಕಲಂ :341, 504,323,506, ಜೊತೆಗೆ 34 ಐಪಿಸಿ ಮತ್ತು ಕಲo 3(1)(r)(s)Act 2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading