
ಮಡಪ್ಪಾಡಿ ಯುವಕ ಮಂಡಲ, ಮಂಜುಶ್ರೀ ಯಕ್ಷಗಾನ ಕಲಾ ಸಂಘ, ಶ್ರೀರಾಮ ಭಜನಾ ಮಂಡಳಿ, ಉಜ್ವಲ ಮಹಿಳಾ ಮಂಡಲ ಹಾಗೂ ಸಮಸ್ತ ಭಕ್ತಾಭಿಮಾನಿಗಳ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.19 ರಂದು ಮಡಪ್ಪಾಡಿ ಯಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 7.00ಕ್ಕೆ ಗಣಪತಿ ಹವನ ಹಾಗೂ 8.00 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಳ್ಳಲಿದೆ. ನಂತರ ಸ್ಥಳೀಯ ಭಜನಾ ತಂಡಗಳ ಭಜನಾ ಕಾರ್ಯಕ್ರಮ ಪೂರ್ವಾಹ್ನ 10 ರಿಂದ ಮಂಜುಶ್ರೀ ಯಕ್ಷಗಾನ ಕಲಾ ಸಂಘ ಹಾಗೂ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷವೈಭವ ತದನಂತರ ವಿದುಷಿ ಕಾವ್ಯಶ್ರೀ ಕಪಿಲ್ ಇವರ ಕಲಾಕಾವ್ಯ ನಾಟ್ಯಶಾಲೆ ಮಡಿಕೇರಿ ಇವರಿಂದ ನೃತ್ಯೋಲ್ಲಾಸ ನೃತ್ಯ ಪ್ರದರ್ಶನ ನಡೆಯಲಿದೆ. ಸಂಜೆ ಕೇರಳದ ಪ್ರಸಿದ್ಧ ಚಿಲಂಗ ಸಿಂಗಾರಿ ಮೇಳಂ ಪಾಂಡಿ ಹಾಗೂ ಶ್ರೀ ರಾಮ ಭಜನಾ ಮಂಡಳಿಯ ಮಕ್ಕಳ ಕುಣಿತ ಭಜನಾ ಪ್ರದರ್ಶನದೊಂದಿಗೆ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಲಿದೆ.

