ಸುಳ್ಯದಲ್ಲಿ ಕಳೆದ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮೂಡಿರುವ ಗೊಂದಲ, ಇತ್ತೀಚಿಗೆ ಕೆಲವೊಂದು ಸಮಿತಿಗಳಿಗೆ ಬಿಜೆಪಿಯವರನ್ನು, ಕಾಂಗ್ರೆಸೇತರ ವ್ಯಕ್ತಿಗಳಿಗೆ ನಾಮನಿರ್ದೇಶನ ಮಾಡಿರುವುದು, ಬಿಜೆಪಿಯವರಿಗೆ ಅನುಕೂಲ ವಾಗುವ ಹಾಗೆ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿರುವುದು ಹಾಗೂ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಕುಂದು ಬರುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸೆ.18ರಂದು ಸುಳ್ಯದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ಕಾರ್ಯಕರ್ತರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಸುಳ್ಯದಲ್ಲಿ ಕಾಂಗ್ರೆಸ್ ಉಳಿಸುವ ಜವಾಬ್ದಾರಿ ಪ್ರಾಮಾಣಿಕ ಕಾರ್ಯಕರ್ತರ ಮೇಲಿದೆ. ಆದುದರಿಂದ ಸುಳ್ಯದಲ್ಲಿ ನಡೆಯುವ ಕಾಂಗ್ರೆಸ್ ಉಳಿಸಿ ಅಭಿಯಾನದ ಪ್ರಯುಕ್ತ ಸೆ.18 ರಂದು ಅಪರಾಹ್ನ 3:00 ಗಂಟೆಗೆ ನಡೆಯುವ ಸಭೆಗೆ ಕಾರ್ಯಕರ್ತರು ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024