Ad Widget

ದೇವಚಳ್ಳ : ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ

ಗುತ್ತಿಗಾರು ವಲಯದ ದೇವಚಳ್ಳ ಕಾರ್ಯ ಕ್ಷೇತ್ರದಲ್ಲಿ  ರೈತ ಕ್ಷೇತ್ರ ಪಾಠಶಾಲೆ( ಕೃಷಿ ತರಬೇತಿ) ಕಾರ್ಯಕ್ರಮ ಹರ್ಲಡ್ಕ ಧನಂಜಯರವರ ಮನೆಯಲ್ಲಿ ಸೆ.17 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಭಾನುಪ್ರಕಾಶ ತಳೂರು ವಹಿಸಿದ್ದರು.‌ ಧನಂಜಯ ಹರ್ಲಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದಯಾ ಪ್ರಕಾಶ್ ಚೀಮುಳ್ಳು,  ಶ್ಯಾಂ ಪ್ರಸಾದ್ ಗೊರಗೋಡಿ, ಜಗದೀಶ ಪರಮಲೆ ಯವರು ಕೃಷಿ...

ಸುಳ್ಯ‌ ಸಿ.ಎ. ಬ್ಯಾಂಕ್ ನಿಂದ ಭತ್ತ ಕೃಷಿಕರಿಗೆ, ಹೈನುಗಾರರಿಗೆ ಗೌರವಾರ್ಪಣೆ – ವಿದ್ಯಾರ್ಥಿ ವೇತನ ವಿತರಣೆ

ಸುಳ್ಯ ಪ್ರಾಥಮಿಕ ಕೃಷಿ‌ಪತ್ತಿನ ಸಹಕಾರ ಸಂಘ ಉತ್ತಮವಾಗಿ ವ್ಯವಹಾರ ನಡೆಸಿಕೊಂಡು ಬರುತ್ತಿದ್ದು ಸದಸ್ಯರ ದ್ಯೇಯೋದ್ದೇಶವನ್ನು ಪೂರೈಸಿಕೊಂಡು ವಿಶ್ವಾಸ ಪೂರ್ಣ ಸೇವೆ ನೀಡುತ್ತಿದೆ.‌ ಅದೇ ರೀತಿ ಸದಸ್ಯರು ಕೂಡಾ ಸಂಘದ ಅಭ್ಯುದಯಕ್ಕಾಗಿ ಸಹಕಾರ ನೀಡಬೇಕು ಎಂದು ಡಿಸಿಸಿ‌ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಸೆ.16 ರಂದು ಸುಳ್ಯ ಸಿ.ಎ.ಬ್ಯಾಂಕ್ ನ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ...
Ad Widget

ಗಾಣಿಗ ಸಮ್ಮಿಲನ ಪೂರ್ವಭಾವಿ ಸಭೆ , ಸ್ಟಿಕ್ಕರ್ ಬಿಡುಗಡೆ.

ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ನೇತ್ರತ್ವದಲ್ಲಿ ಸೆ.೨೪ ಭಾನುವಾರ ನಡೆಯುವ ಸಮುದಾಯ ಬಂದುಗಳ ಕ್ರೀಡಾಕೂಟ ಮತ್ತು ಗಾಣಿಗ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಸಂಧ್ಯಾರಶ್ಮಿ ಕಛೇರಿ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ವಹಿಸಿದ್ದರು . ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಗಾಣಿಗ ಸ್ವಾಮಿಜಿಗಳನ್ನು ಪೂರ್ಣಕುಂಭ ಸ್ವಾಗತಿಸಿ...

ಕುಕ್ಕೆಯಲ್ಲಿ 53ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ : ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರ ಸ್ಪರ್ಧೆ

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ 53ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.19ರಿಂದ ಸೆ.23 ವರೆಗೆ ಕುಕ್ಕೆಸುಬ್ರಹ್ಮಣ್ಯದ ಉತ್ತರಾದಿ ಮಠದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.ಅಲ್ಲದೆ ಸಾಂಸ್ಕೃತಿಕ ಮನೋರಂಜನೆಗಳು ಕುಕ್ಕೆಶ್ರೀ ಕಲಾವೇದಿಕೆಯಲ್ಲಿ ಜರುಗಲಿದೆ.ಈ ಬಾರಿ ಪ್ರಪ್ರಥಮವಾಗಿ ಸೆ.23ರಂದು ನಡೆಯುವ ಗಣಪತಿ ಶೋಭಾಯಾತ್ರೆಗೆ ಸ್ತಬ್ಧಚಿತ್ರ ಸ್ಪರ್ಧೆ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಸ್ತಬ್ದಚಿತ್ರವನ್ನು ಆಯೋಜಿಸಿ...

ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿಯಿಂದ ಸುಳ್ಯದ ಮಹಿಳೆಗೆ ತ್ರಿವಳಿ ತಲಾಖ್ – ಪ್ರಕರಣ ದಾಖಲು.

ಸುಳ್ಯ ಜಯನಗರ ನಿವಾಸಿ ಮಿಸ್ರಿಯಾ ಎಂಬ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿರುವ ಘಟನೆ ವರದಿಯಾಗಿದೆ.ಮಿಸ್ರಿಯಾರವರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಾಶಿದ್ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಿಸ್ರಿಯ ಎಂಬ...

ಸೆ.19 : ಮಡಪ್ಪಾಡಿಯಲ್ಲಿ 21 ನೇ ವರ್ಷದ ಗಣೇಶೋತ್ಸವ

ಮಡಪ್ಪಾಡಿ ಯುವಕ ಮಂಡಲ, ಮಂಜುಶ್ರೀ ಯಕ್ಷಗಾನ ಕಲಾ ಸಂಘ, ಶ್ರೀರಾಮ ಭಜನಾ ಮಂಡಳಿ, ಉಜ್ವಲ ಮಹಿಳಾ ಮಂಡಲ ಹಾಗೂ ಸಮಸ್ತ ಭಕ್ತಾಭಿಮಾನಿಗಳ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.19 ರಂದು ಮಡಪ್ಪಾಡಿ ಯಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 7.00ಕ್ಕೆ ಗಣಪತಿ ಹವನ ಹಾಗೂ 8.00 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಳ್ಳಲಿದೆ....

ಅರಣ್ಯ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ವೃತ್ತಗಳಲ್ಲಿ ಹಂತದಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 310 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 13 ವೃತ್ತಗಳ ಹಂತದಲ್ಲಿ ಈ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್ಎಸ್‌ಎಲ್‌ಸಿ ವಿಧ್ಯಾರ್ಹತೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಈ ಹುದ್ದೆಗೆ ಸೆಪ್ಟೆಂಬರ್ 27ರಿಂದ ಅರ್ಜಿ ಸಲ್ಲಿಕೆ...

ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ-ಸರಕಾರಿ ಪ್ರೌಢ ಶಾಲೆ ಎಣ್ಮೂರಿಗೆ ದ್ವಿತೀಯ ಸ್ಥಾನ

ಜ್ಞಾನದೀಪ ಪ್ರೌಢಶಾಲೆ ಎಲಿಮಲೆ ಇಲ್ಲಿ ಸೆಪ್ಟೆಂಬರ್ 16ರಂದು ನಡೆದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆ ಎಣ್ಮೂರು ಶಾಲಾ ಮಕ್ಕಳ ಅಭಿನಯದ ಮೂಢನಂಬಿಕೆಗೆ ಸಂಬಂಧಿಸಿದ ನಾಟಕ ದ್ವಿತೀಯ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ನಾಟಕವನ್ನು ರಂಗ ಕಲಾವಿದ ಶ್ರೀ ಪೂರ್ಣೇಶ್ ಆಚಾರ್ಯ ಪುತ್ತೂರು ಮತ್ತು ಶ್ರೀ ರಾಕೇಶ್ ಆಚಾರ್ಯ...

ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದಿರುವುದು ಔಚಿತ್ಯಪೂರ್ಣ : ಎಂ ವೆಂಕಪ್ಪ ಗೌಡ

ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಕರೆದಿರುವುದು ಉತ್ತಮ ಬೆಳವಣಿಗೆ. ಕಾಂಗ್ರೆಸ್ ಸರಕಾರ ಇದ್ದು ಸಹ ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ ಅಕ್ರಮ ಸಕ್ರಮ ಸಮಿತಿಯ ನಾಮನಿರ್ದೇಶನ ಗೊಳಿಸಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ. ಹಾಗಾಗಿ ಈ ಕೆಲಸ ಮಾಡಿರುವ ಅಧಿಕಾರಿಗಳ ನಡೆಯ ಕುರಿತು ಮತ್ತು ಮುಂದಿನ ಕೆಲವು ನಾಮನಿರ್ದೇಶನ ಮತ್ತು ದೇವಸ್ಥಾನಗಳ ನಾಮನಿರ್ದೇಶನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ...


ಕಾಂಗ್ರೆಸ್ ಪಕ್ಷ ಉಳಿಸಿ ಆಂದೋಲನಕ್ಕೆ ಕರೆ – ಸೆ.18ರಂದು ಕಾರ್ಯಕರ್ತರ ಸಭೆ

ಸುಳ್ಯದಲ್ಲಿ ಕಳೆದ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಮೂಡಿರುವ ಗೊಂದಲ, ಇತ್ತೀಚಿಗೆ ಕೆಲವೊಂದು ಸಮಿತಿಗಳಿಗೆ ಬಿಜೆಪಿಯವರನ್ನು, ಕಾಂಗ್ರೆಸೇತರ ವ್ಯಕ್ತಿಗಳಿಗೆ ನಾಮನಿರ್ದೇಶನ ಮಾಡಿರುವುದು, ಬಿಜೆಪಿಯವರಿಗೆ ಅನುಕೂಲ ವಾಗುವ ಹಾಗೆ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿರುವುದು ಹಾಗೂ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿರುವ  ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸಕ್ಕೆ ಕುಂದು ಬರುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸೆ.18ರಂದು ಸುಳ್ಯದ ಲಯನ್ಸ್ ಕ್ಲಬ್...
Loading posts...

All posts loaded

No more posts

error: Content is protected !!