Ad Widget

ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವೈಭವದ ಅಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಧಾರ್ಮಿಕ ಸಭೆ.

ಜಗತ್ತಿಗೆ ಬೆಳಕನ್ನು ನೀಡಿದ ದೇಶ ನಮ್ಮ ಭಾರತ. ಭಾರತ ದೇವಲೋಕಕ್ಕೆ ಸಮಾನವಾದ ಪುಣ್ಯ ಭೂಮಿ. ದೇವತೆಗಳು ಮತ್ತೆ ಹುಟ್ಟಿ ಬರಲು ಬಯಸುವ ಭೂಮಿ ಇದು. ಆಯಾ ಕಾಲದಲ್ಲಿ ಹೇಗೆ ಬದುಕಬೇಕು ಎಂದು ಭಗವಂತನು ಮನುಷ್ಯನಾಗಿ ಹುಟ್ಟಿ ಬಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆ ರೀತಿ ಬದುಕುವುದು ನಮ್ಮ ಧರ್ಮ. ಭಗವಂತನು ನೀಡಿದ ಈ ಸಂದೇಶ ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸತ್ಸಂಗ ಪ್ರಮುಖ್ ಸೂರ್ಯನಾರಾಯಣ ಭಟ್ ಕಶೆಕೋಡಿ ಹೇಳಿದರು

. . . . . . .

. ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಆಶ್ರಯದಲ್ಲಿ
ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ 10ನೇ ವರುಷದ ಸುಳ್ಯ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಶ್ರೀಕೃಷ್ಣನು ತನ್ನ ಜೀವನದ‌ ಮೂಲಕ ತೋರಿಸಿದ ಸಾತ್ವಿಕ ಸಂದೇಶಗಳನ್ನು ನೀಡಿದ್ದಾರೆ. ಪ್ರತಿಯೊಂದು ಹಬ್ಬಗಳು ಹಲವು ಸಂದೇಶವನ್ನು ನೀಡುತ್ತದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಆ ಸಂದೇಶವನ್ನು ನೆನಪಿಸುವುದು
ಅತೀ ಅಗತ್ಯ. ಆ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಅವರು ಹೇಳಿದರು. ಎಲ್ಲಾ ಶಾಸ್ತ್ರಗಳ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್ಗೀತೆ ಎಂದ ಅವರು ಪ್ರಕೃತಿಯೇ ದೇವರು ಎಂಬ ಸಂದೇಶ ನೀಡಿದ ಶ್ರೀಕೃಷ್ಣ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡುವ ನೀತಿ ಪಾಠವನ್ನು ತಿಳಿಸಿದ್ದಾರೆ ಎಂದು ಹೇಳಿದರು. 60 ವರ್ಷದಲ್ಲಿ ಜಗತ್ತು ಮೆಚ್ಚುವ ಸಾಧನೆಯನ್ನು ವಿಶ್ವ ಹಿಂದೂ ಪರಿಷದ್ ಮಾಡಿದೆ, ನಾವು ಊಹಿಸಲು ಆಸಾಧ್ಯವಾದ ಕೆಲಸ ರಾಮ ಮಂದಿರದಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆ ಅದು ನಡೆಯಲಿದೆ ಇದಕ್ಕೆಲ್ಲ ನಮಗೆಲ್ಲ ಮಾರ್ಗ ದರ್ಶನ ನೀಡುವ ಸಂಘವೇ ಕಾರಣ ಹಾಗಾಗಿ ನಾವೆಲ್ಲ ಸಂಘದ ಅಣತಿಯಂತೆ ನಡೆಯಬೇಕು ಯುವ ಜನತೆ ವಿಧ್ಯೆ , ಭಕ್ತಿ , ವಿನಯದಿಂದ ಇವೆಲ್ಲವನ್ನು ಗಳಿಸಲು ಸಾಧ್ಯ ಎಂದು ಅವರು ಹೇಳಿದರು.

ದಿ.ನವೀನ್ ರೈ ಮೇನಾಲ ಸಭಾ ವೇದಿಕೆಯಲ್ಲಿ ಧಾರ್ಮಿಕ ಸಭೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನಾಡುತ್ತಾ ಕೃಷ್ಣ ಹೇಗೆ ಬೆಣ್ಣೆಯನ್ನು ತಿನ್ನಲು ತನ್ನ ಮಿತ್ರರನ್ನು ಒಂದು ಗೂಡಿಸಿ ಗೋಪುರ ನಿರ್ಮಿಸಿ ಹತ್ತಿ ಬೆಣ್ಣೆ ತಿನ್ನುತ್ತಿದ್ದನೋ ಹಾಗೆ ಇಂದು ನಮ್ಮ ಯುವಕರ ತಂಡಗಳು ಅಟ್ಟಿ ಮಡಕೆಯನ್ನು ಗೋಪುರ ನಿರ್ಮಿಸಿ ಒಡೆಯುತ್ತಿದ್ದಾರೆ ಎಂದು ಹೇಳಿದರು.

ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಮಾತನಾಡಿ ಹಿಂದು ಧರ್ಮ ರಕ್ಷಣೆ ನಮ್ಮೆಲರ ಹೊಣೆಯಾಗಿದೆ ಧರ್ಮ ಇಲ್ಲದೇ ಇದ್ದರೆ ಪಶುವಿಗೆ ಸಮಾನ ಎಂದು ಹೇಳಿದರು.

ಬಜರಂಗದಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಮಾತನಾಡಿ ಹಿಂದು ಯುವಕರು ತಮ್ಮ ಮೇಲೆ ಪ್ರಕರಣ ಧಾಖಲಿಸಿಕೊಳ್ಳುವುದು ಸ್ವಂತಕ್ಕಾಗಿ ಅಲ್ಲಾ ಧರ್ಮಕ್ಕಾಗಿ ಎಂದರು , ನಾವು ಅಹಿಂಸ ಮಾರ್ಗ ಮಾತ್ರವನ್ನೆ ಅನುಸರಿಸಿದರೆ ನಮಗು ಮುಂದೆ ಕಾಶ್ಮಿರಿ ಪಂಡಿತರ ಸ್ಥಿತಿ ಬರಬಹುದು ಎಂದು ಎಚ್ಚರಿಕೆಯ ಸಂದೇಶ ನೀಡಿದರು.

ಮಾಜಿ ಅಧ್ಯಕ್ಷರು ಮತ್ತು ಗೋಸಂರಕ್ಷಕರಿಗೆ ಸನ್ಮಾನ.

ಸ್ವದೇಶಿ ಗೋಸಂರಕ್ಷಕ ಕೆ. ವಿಶ್ವನಾಥ ಪೈ ಐವರ್ನಾಡು ಅವರನ್ನು ಸನ್ಮಾನಿಸಲಾಯಿತು. ಮೊಸರು ಕುಡಿಕೆ ಉತ್ಸವ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ದಿ.ಸಂತೋಷ್ ಮಡ್ತಿಲ ಪರವಗಾಇ ಪುತ್ರ ರೋಹನ್ ಗೌಡ , ಮಾಜಿ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ್ ಯಾದವ್,ರಜತ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಸಂದೀಪ್ ವಳಲಂಬೆ, ಕೋಶಾಧಿಕಾರಿ ನವೀನ್ ಎಲಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಅಭಿಜ್ಞಾ ಭಟ್ ಪ್ರಾರ್ಥಿಸಿದರು. ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ, ಮೊಸರು ಕುಡಿಕೆ ಉತ್ಸವ ಸಮಿತಿ ಕಾರ್ಯದರ್ಶಿ ಸಂದೀಪ್ ವಳಲಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪ್ರಕಾಶ್ ಯಾದವ್ ಮತ್ತು ಬೇಬಿ ವಿದ್ಯಾ ಸನ್ಮಾನಿತರ ಪರಿಚಯ ಮಾಡಿದರು. ಕೋಶಾಧಿಕಾರಿ ನವೀನ್ ಎಲಿಮಲೆ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ರಸ್ತೆಯುದ್ದಕ್ಕು ಅಟ್ಟಿ ಮಡಕೆ ಒಡೆದು ಭವ್ಯವಾದ ಮೆರವಣಿಗೆಯೊಂದಿಗೆ ಅಬ್ಬರದ ಸಿಡಿಮದ್ದಿನ ಪ್ರದರ್ಶನದೊಂದಿಗೆ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ಜರುಗಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!