
ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ಎಂಬಲ್ಲಿ ಗಾಯಗೊಂಡು ನಡೆದಾಡಲಾಗದ ಸ್ಥಿತಿಯಲ್ಲಿದ್ದ ಹಸುವಿಗೆ ಪಶುವೈದ್ಯರಾದ ವೆಂಕಟಾಚಲಪತಿ ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸೆ.15 ರಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವತಿಯಿಂದ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ ನಡೆದಿದ್ದು, ಲಸಿಕೆ ನೀಡಲು ಪಶುವೈದ್ಯರಾದ ವೆಂಕಟಾಚಲಪತಿ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಲ್ಲೇಮಠ ಎಂಬಲ್ಲಿ ಹಸುವೊಂದು ಗಾಯಗೊಂಡು ನಡೆದಾಡಲಾಗದ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಸ್ಪಂದಿಸಿದ ವೆಂಕಟಾಚಲಪತಿ ಅವರು ಗ್ರಾಮ ಪಂಚಾಯತ್ ನವರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಸುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
