
ಸರಕಾರ 108 ಪಿಡಿಒಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದು ತಾಲೂಕಿನ ಮೂವರು ಪಿಡಿಒ ಗಳಿಗೆ ವರ್ಗಾವಣೆ ಆದೇಶವಾಗಿದೆ. ಅಮರ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿದ್ದ ಆಕಾಶ್ ಅವರಿಗೆ ಕೊಳ್ಳೆಗಾಲ ತಾಲೂಕಿನ ದೊಡ್ಡಿಂದ್ ವಾಡಿ ಪಂಚಾಯತ್ ಗೆ, ಕೊಲ್ಲಮೊಗ್ರದಲ್ಲಿದ್ದ ರವಿಚಂದ್ರ ಅಕ್ಕಪ್ಪಾಡಿ ಅವರಿಗೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೆ ಹಾಗೂ ಕಲ್ಮಡ್ಕದಲ್ಲಿದ್ದ ಪ್ರವೀಣ್ ಚಿಲ್ಪಾರ್ ಅವರಿಗೆ ಕೊಡಿಯಾಲ ಗ್ರಾಮ ಪಂಚಾಯತ್ ಗೆ ವರ್ಗಾವಣೆ ಆದೇಶವಾಗಿದೆ. ಅಮರ ಮುಡ್ನೂರು ಗ್ರಾಮ ಪಂಚಾಯತ್ ಗೆ ಮುರುಳ್ಯ ಗ್ರಾ.ಪಂ.ಕಾರ್ಯದರ್ಶಿ ದಯಾನಂದ ಪತ್ತುಕುಂಜ ರಿಗೆ ಪ್ರಭಾರ ವಹಿಸಲಾಗಿದೆ.
