- Friday
- November 1st, 2024
ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಕಾರ್ತಿಕ್ ಅವರ ಉಪಸ್ಥಿತಿಯಲ್ಲಿ ಶಾಂತಿ ಸಭೆ ಸೆ.16 ರಂದು ನಡೆಯಿತು. ಗಣೇಶೋತ್ಸವ ಹಬ್ಬವನ್ನು ಇಲಾಖೆಯ ಅನುಮತಿಯೊಂದಿಗೆ ಆಚರಿಸಬೇಕು. ಮೂರ್ತಿಯನ್ನು ವಿವಾದಿತ ಸ್ಥಳದಲ್ಲಿ ಸ್ಥಾಪನೆ ಮಾಡಬಾರದು. ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಬಾರದು. ಶಾಂತಿಯುತವಾಗಿ ಹಬ್ಬವನ್ನು ನಡೆಸಬೇಕು.ಅಗ್ನಿಶಾಮಕ ದಳ,ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು ಎಂದು...
ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ,ಎನ್ ಎಸ್ ಎಸ್ ಮತ್ತು ಇತಿಹಾಸ ಹಾಗೂ ರಾಜ್ಯಶಾಸ್ತ್ರ ವಿಭಾಗಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಯ ಪ್ರಯುಕ್ತ ಭಾರತ ಸಂವಿಧಾನದ ಪೀಠಿಕೆ ಯನ್ನು ಸಾಮೂಹಿಕವಾಗಿ ಓದುವ ಕಾರ್ಯಕ್ರಮ ಏರ್ಪಡಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರ ಭಟ್ ವಹಿಸಿ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು .ದಿನದ...
ಗೌಡರ ಯುವ ಸೇವಾಸಂಘ ಸುಳ್ಯ ಪ್ರವರ್ತಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ.ಆ. ಸೊಸೈಟಿಯ ವಾರ್ಷಿಕ ಮಹಾಸಭೆ ಸೆ.16ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ಇಲ್ಲಿ ನಡೆಯಿತು, ಸಂಘವು 2022-23 ನೇ ಆರ್ಥಿಕ ವರ್ಷದಲ್ಲಿ 1.51 ಕೋಟಿ ಲಾಭ ಗಳಿಸಿದ್ದು, ಶೇ.20 ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ ಜಯರಾಮ ಘೋಷಿಸಿದರು. ಸಭೆಯಲ್ಲಿ ಉಪಾಧ್ಯಕ್ಷ...
ನಾಡಿನ ಸಮಾಚಾರ ಸೇವಾ ಸಂಘ (ರಿ), ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಪ್ರತೀ ವರ್ಷ ಕೊಡ ಮಾಡುವ "ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ ಆಯ್ಕೆಯಾದಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರನ್ನು ಯುವಕ ಮಂಡಲ (ರಿ) ಕೊಳ್ತಿಗೆ ಪೆರ್ಲಂಪಾಡಿ...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ಸೆ.15 ರಂದು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪಶುವೈದ್ಯಾಧಿಕಾರಿ...
ಸರಕಾರ 108 ಪಿಡಿಒಗಳನ್ನು ವರ್ಗಾವಣೆಗೊಳಿಸಿ ಆದೇಶ ಮಾಡಿದ್ದು ತಾಲೂಕಿನ ಮೂವರು ಪಿಡಿಒ ಗಳಿಗೆ ವರ್ಗಾವಣೆ ಆದೇಶವಾಗಿದೆ. ಅಮರ ಮುಡ್ನೂರು ಗ್ರಾಮ ಪಂಚಾಯತ್ ನಲ್ಲಿದ್ದ ಆಕಾಶ್ ಅವರಿಗೆ ಕೊಳ್ಳೆಗಾಲ ತಾಲೂಕಿನ ದೊಡ್ಡಿಂದ್ ವಾಡಿ ಪಂಚಾಯತ್ ಗೆ, ಕೊಲ್ಲಮೊಗ್ರದಲ್ಲಿದ್ದ ರವಿಚಂದ್ರ ಅಕ್ಕಪ್ಪಾಡಿ ಅವರಿಗೆ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೆ ಹಾಗೂ ಕಲ್ಮಡ್ಕದಲ್ಲಿದ್ದ ಪ್ರವೀಣ್ ಚಿಲ್ಪಾರ್ ಅವರಿಗೆ ಕೊಡಿಯಾಲ...
ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ "ಸಂವಿಧಾನ ಪೀಠಿಕೆ ಓದೋಣ ಬನ್ನಿ" ಕಾರ್ಯಕ್ರಮವನ್ನು ಸುಳ್ಯದ ಲ್ಯಾಂಪ್ ಸೊಸೈಟಿ ಬಳಿ ಇಂದು ಆಯೋಜಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಮಾಸ್ಟರ್ ಎಜ್ಯುಕೇಶನ್ ಸಂಚಾಲಕ ಶಶಿಧರ ಎಂ ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಪೀಠಿಕೆ ಭೋದಿಸಿದರು. ಈ ಸಂದರ್ಭದಲ್ಲಿ ಮಾಜಿ ನಗರ ಪಂಚಾಯತ್ ಉಪಾಧ್ಯಕ್ಷ ಕೆ...
ದಾನಗಳಲ್ಲಿ ಹಲವು ವಿಧದ ದಾನಗಳಿವೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ಇವೆಲ್ಲವುಗಳಿಂದಲೂ ಮುಖ್ಯವಾದ ರಕ್ತದಾನ. ರಕ್ತದಾನ ಶ್ರೇಷ್ಠವಾದ ದಾನ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಗಳಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತ ಬೇಕಾದಲ್ಲಿ ಬದಲಿ ವ್ಯವಸ್ಥೆಯಾಗಿ ಒಬ್ಬರ ದೇಹದಿಂದ ತೆಗೆದ ರಕ್ತವನ್ನೇ ಇನ್ನೊಬ್ಬರಿಗೆ ನೀಡಬೇಕಾಗುತ್ತದೆ. ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಪ್ರಭಾರ ಪ್ರಾಚಾರ್ಯ ಕೆ ದಿನೇಶ್ ನುಡಿದರು. ಅವರು...
ಚಲಿಸುತ್ತಿದ್ದ ಪಿಕಪ್ ಗೆ ಸ್ಕೂಟಿ ಸವಾರನೊಬ್ಬ ಹಿಂಬದಿಯಿಂದ ಗುದ್ದಿ ರಸ್ತೆಗೆ ಎಸೆಯಲ್ಪಟ್ಟ ಘಟನೆ ಶುಕ್ರವಾರ ರಾತ್ರಿ ಪರಿವಾರಕಾನ ಬಳಿ ನಡೆದಿದೆ. ಅರಂಬೂರು ಕಡೆಯಿಂದ ಪಿಕಪ್ ಹಾಗೂ ಸ್ಕೂಟಿ ಒಂದೇ ಪಥದಲ್ಲಿ ಸಾಗಿ ಬರುತ್ತಿದ್ದವು. ಈ ವೇಳೆ ಪಿಕಪ್ ಹಿಂದೆ ಇದ್ದ ಕಬ್ಬಿಣದ ರಾಡ್ ಅನ್ನು ಸರಿಯಾಗಿ ಗಮನಿಸದೆ ಸ್ಕೂಟಿ ಸವಾರ ಬಂದು ಗುದ್ದಿದ್ದಾನೆ. ಈ ವೇಳೆ...
ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದ ಹೋಟೆಲ್ ಕಾರ್ಮಿಕನ ಮೃತ ದೇಹವನ್ನು ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಹಿನ್ನೆಲೆಯಲ್ಲಿ ಸುಳ್ಯ ಠಾಣಾ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ. ರಥಬೀದಿಯಲ್ಲಿ ಕಾರ್ಯಚರಿಸುತ್ತಿದ್ದ ಸ್ವಾಮಿ ಪ್ರಸಾದ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಭಾರತ ಮೂಲದ ಲೂಲು ಎಂಬುವವರು ಕಳೆದ 13 ದಿನಗಳ ಹಿಂದೆ ಹೃದಯಾಘಾತದಿಂದ ಕೆವಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು....
Loading posts...
All posts loaded
No more posts