ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ “ಸಂವಿಧಾನ ಪೀಠಿಕೆ ಓದೋಣ ಬನ್ನಿ” ಕಾರ್ಯಕ್ರಮವನ್ನು ಸುಳ್ಯದ ಲ್ಯಾಂಪ್ ಸೊಸೈಟಿ ಬಳಿ ಇಂದು ಆಯೋಜಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಮಾಸ್ಟರ್ ಎಜ್ಯುಕೇಶನ್ ಸಂಚಾಲಕ ಶಶಿಧರ ಎಂ ಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನ ಪೀಠಿಕೆ ಭೋದಿಸಿದರು. ಈ ಸಂದರ್ಭದಲ್ಲಿ ಮಾಜಿ ನಗರ ಪಂಚಾಯತ್ ಉಪಾಧ್ಯಕ್ಷ ಕೆ ಗೋಕುಲ್ ದಾಸ್, ಲ್ಯಾಂಪ್ ಸೊಸೈಟಿ ಕಾರ್ಯದರ್ಶಿ ಶೇಖರ್, ಕಣ್ಮಣಿ ಎಂಟರ್ಪ್ರೈಸಸ್ ನ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ,ಸಂಪೂರ್ಣ ಬೇಕರಿ ಮಾಲಕ ವಿಶ್ವನಾಥ ಪುತ್ತಿಲ, ಲ್ಯಾಂಪ್ ಸೊಸೈಟಿ ಸಿಬ್ಬಂದಿಗಳಾದ ಭವ್ಯ, ಸಂದೀಪ್, ಲತಾಶ್ರೀ, ರಾಮಕೃಷ್ಣ ಕಕ್ಕೇಬೆಟ್ಟು, ಲತೀಫ್ ನಾವೂರು ಹಾಗೂ ಬುಟ್ಟಿ ಸ್ಟೋರ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Thursday
- November 21st, 2024