ಜೀವನದಲ್ಲಿ ಕೆಲವೊಮ್ಮೆ ನಾವು ಎಲ್ಲರ ಮೇಲೆಯೂ ಕಣ್ಣುಮುಚ್ಚಿ ನಂಬಿಕೆ ಇಡುತ್ತಿರುತ್ತೇವೆ. ನಾವು ನಂಬಿಕೆ ಇಡುವ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಅರ್ಹರಾ…? ಅಂತ ನಾವು ಯೋಚಿಸುವುದೇ ಇಲ್ಲ. ಆದರೆ ಯಾವತ್ತಾದರೂ ಒಂದು ದಿನ ಆ ವ್ಯಕ್ತಿಗಳು ನಮ್ಮ ನಂಬಿಕೆಗೆ ಮೋಸ ಮಾಡಿ ಹೊರಟುಹೋದರೆ ನಂಬಿ ಮೋಸ ಹೋದ ನಾವು ದುಃಖಿಸುತ್ತಾ ಕೂರಬೇಕಾಗುತ್ತದೆ. ಅದಕ್ಕಾಗಿಯೇ ಹಿರಿಯರು ಒಂದು ಮಾತನ್ನು ಹೇಳಿದ್ದಾರೆ ಅದೇನೆಂದರೆ “ಈ ಜಗತ್ತಿನಲ್ಲಿ ಯಾವ ವ್ಯಕ್ತಿಗಳೂ ಕೂಡ ನಮಗೆ ಮೋಸ ಮಾಡುವುದಿಲ್ಲ, ಬದಲಾಗಿ ನಾವೇ ಆ ವ್ಯಕ್ತಿಗಳ ಮೇಲೆ ಅವಶ್ಯಕತೆಗಿಂತ ಹೆಚ್ಚು ನಂಬಿಕೆ ಇಟ್ಟು ಮೋಸ ಹೋಗಿರುತ್ತೇವೆ” ಅಂತ. ಹಾಗಾಗಿ ನಾವು ಒಬ್ಬರ ಮೇಲೆ ನಂಬಿಕೆ ಇಟ್ಟು ಮೋಸ ಹೋಗುವುದಕ್ಕಿಂತ ನಂಬಿಕೆ ಇಡುವ ಮುಂಚೆ ಯೋಚಿಸಿ ನಂಬಿಕೆ ಇಟ್ಟರೆ ಮೋಸ ಹೋಗುವ ಪ್ರಮೇಯವೇ ಬರುವುದಿಲ್ಲ. ಹಾಗಂತ ಯಾರ ಮೇಲೆಯೂ ನಂಬಿಕೆ ಇಡಬಾರದು ಅಂತ ಅಲ್ಲ, ಆದರೆ ನಂಬಿಕೆ ಇಡುವ ಮೊದಲು ಆ ವ್ಯಕ್ತಿ ನಮ್ಮ ನಂಬಿಕೆಗೆ ಅರ್ಹರಾ…? ಅಂತ ಯೋಚಿಸಿ ನಂಬಿಕೆ ಇಡುವುದು ಉತ್ತಮ. ಯಾಕಂದ್ರೆ ನಂಬಿಕೆ ಅನ್ನೋದು ತುಂಬಾ ಅಮೂಲ್ಯವಾದದ್ದು, ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ಸಿಗುವುದಿಲ್ಲ…
✍️ಉಲ್ಲಾಸ್ ಕಜ್ಜೋಡಿ