ಅಜ್ಜಾವರ ಗ್ರಾಮದ ಪಡ್ಡಂಬೈಲಿನಲ್ಲಿ ಚಿರತೆ ಸಾವು ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿತರಿಗೆ ಮಂಗಳೂರಿನ 6 ನೇ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ದೊರಕಿದೆ.
ಪಡ್ಡಂಬೈಲಿನಲ್ಲಿ ಆ.29 ರಂದು ಉರುಳಿಗೆ ಚಿರತೆಯೊಂದು ಬಿದ್ದು ಮೃತಪಟ್ಟಿತ್ತು. ಉರುಳಿಟ್ಟು ಚಿರತೆ ಸಾವಿಗೆ ಕಾರಣರಾದರೆಂಬ ಆರೋಪದಲ್ಲಿ ಸ್ಥಳ ಮಾಲಿಕರಾದ ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂಬುವವರ ವಿರುದ್ದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಲಾಗಿತ್ತು. ಆರೋಪಿತರನ್ನಹ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ನ್ಯಾಯಾಲಯದಿಂದ ಇರ್ವರಿಗೆ ಷರತ್ತುಬದ್ಧ ಜಾಮೀನು ದೊರೆತಿದ್ದು ನಾಳೆ ಅಥವಾ ನಾಳಿದ್ದು ಸಂಪೂರ್ಣ ನ್ಯಾಯಾಲಯದ ಪ್ರಕ್ರಿಯೆ ಮುಗಿದು ಹೊರಬರಲಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿತ ಪರವಾಗಿ ಸುಳ್ಯದ ವಕೀಲರ ಸಂಘದ ಅಧ್ಯಕ್ಷರಾದ ನ್ಯಾಯವಾದಿ ನಾರಾಯಣ ಕೆ, ಚಂದ್ರಶೇಖರ ಸೋಣಂಗೇರಿ, ವಿಪುಲ್, ಅನಿತಾ ವಾದಿಸಿದ್ದಾರೆ.