ಗಂಡನೊಟ್ಟಿಗೆ ಜಗಳವಾಡಿ ಮಾನಸಿಕ ಸ್ಥಿರತೆ ಕಳೆದುಕೊಂಡ ಮಹಿಳೆ ನದಿಗೆ ಹಾರಲು ಹೋಗಿ ರಾದ್ಧಾಂತ ಮಾಡಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಸಂಬಂಧಿಕರು ನೀರಿಗೆ ಹಾರಿದ್ದಾರೆ ಎಂದು ಹೇಳಿದ ಮಹಿಳೆಯೋರ್ವರು ಕಾಂತಮಂಗಲ ಸೇತುವೆ ಬಳಿ ರೋಧಿಸುತ್ತಿರುವುದನ್ನು ಕಂಡು ಸ್ಥಳೀಯರು ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಫೋನ್ ಮಾಡಿ ತಿಳಿಸಿದ್ದರು. ರಾದ್ಧಾಂತ ಎಬ್ಬಿಸಿದ ಮಹಿಳೆಯನ್ನು ಸರಿಯಾಗಿ ವಿಚಾರಿಸಿದಾಗ ಜಗಳವಾಗಿರುವ ವಿಷಯ ತಿಳಿದುಬಂತು. ಇದೀಗ ಅವರ ಮನೆಯವರು ಬಂದು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಇವರು ಕೂಲಿ ಕಾರ್ಮಿಕ ದಂಪತಿಗಳು ಎಂದು ತಿಳಿದು ಬಂದಿದೆ.. ಸದ್ಯ ಪೋಲಿಸ್ ಅಧಿಕಾರಿಗಳು ಕರೆತಂದರು.