ಪಾಟಾಳಿಯಾನೆ ಗಾಣಿಗ ಸಮಾಜ ಸೇವ ಸಂಘ (ರಿ) ಸುಳ್ಯ ಇದರ ವಾರ್ಷಿಕ ಮಹಾಸಭೆ ಮತ್ತು ಗಾಣಿಗ ಸಮ್ಮಿಲನ ಕಾರ್ಯಕ್ರಮವು ಅ-೧ರಂದು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ತಿಳಿಸಿದರು.
ಅವರು ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತಾನಾಡುತ್ತಾ ಕಾರ್ಯಕ್ರಮಗಳ ವಿವರವನ್ನು ನೀಡಿದರು.
ವಾರ್ಷಿಕ ಮಹಾಸಭೆ ಆರೋಗ್ಯನಿಧಿ ವಿತರಣೆ
ಪ್ರತಿಭಾ ಪುರಸ್ಕಾರವು ಪೂರ್ವಾಹ್ನ ಗಂಟೆ 9-00ಕ್ಕೆ ಜರುಗಲಿದೆ ಕಾರ್ಯಕ್ರಮದ ಸಭಾಧ್ಯಕ್ಷತೆ ಚಂದ್ರಶೇಖರ ಉದ್ದ೦ತಡ್ಕ (ನ್ಯಾಯವಾದಿಗಳು ) ಅಧ್ಯಕ್ಷರು, ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ಮುಖ್ಯ ಅತಿಥಿಗಳಾಗಿ ಶಂಕರ ಪಾಟಾಳಿ ಪರಿವಾರಕಾನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರುಗಳು, ಅಷ್ಟು ಮಾಸ್ತರ್ ಜಯನಗರ
ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ,ಮಹಾಲಿಂಗ ದೇರೆಬೈಲು ನಿವೃತ್ತ ಉಪ ತಹಶೀಲ್ದಾರರು, ಮಂಗಳೂರು,ಚಂದ ಕುಡೆಕಲ್ಲು
ಕರಣಿಕರು, ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರ ಕುಂಬಳೆ ,ಮಹಾಲಿಂಗನ್ ಬಾಜಾರ್ತೋಟ್ಟಿ ಸಂಘದ ಆಂತರಿಕ ಲೆಕ್ಕ ಪರಿಶೋಧಕರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ವಾರ್ಷಿಕ ಮಹಾಸಭೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಕೊಡುಗೆ
SSLC: ಕೆ ಮಹಾಲಿಂಗ ದೇರೆಬೈಲ ಇವರ ತಂದೆ ದಿ. ಅಪ್ಪ ಸಾಲಾಳಿ ಇವರ ಸ್ಮರಣಾರ್ಥ ಶಾಶ್ವತ ನಿಧಿ,PIC: ಅಪ್ಪ ಪಾಟಾಳಿ ಜಯನಗರ, ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರತ್ತೂರು ಇವರು ನೀಡಲಿದ್ದಾರೆ.ಪೂರ್ವಾಹ್ನ ಗಂಟೆ 10-00ಕ್ಕೆ ಗಾಣಿಗರ ಸಮ್ಮಿಲನ ಕಾರ್ಯಕ್ರಮ ಜರುಗಲಿದ್ದು ಆಶೀರ್ವಚನ ಶ್ರೀ ಶ್ರೀ ಶ್ರೀ ಪೂರ್ಣಾನಂದ ಪುರಿ ಮಹಾಸ್ವಾಮೀಜಿ ನೀಡಲಿದ್ದಾರೆ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನು ಕು. ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ ಕಾರ್ಯಕ್ರಮದ
ಸಭಾಧ್ಯಕ್ಷತೆಯನ್ನು ಚಂದ್ರಶೇಖರ ಉದಂತಡ್ಕ (ನ್ಯಾಯವಾದಿಗಳು) ಅಧ್ಯಕ್ಷರು,
ಮುಖ್ಯ ಅತಿಥಿಗಳಾಗಿ ರಾಜಶೇಖ ಅಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘ ಬೆಂಗಳೂರು, ಸುದರ್ಶನ್ ಮಾಜಿ ಸ್ಪೀಕರ್, ಕರ್ನಾಟಕ ಸರಕಾರ,ಅಂಕ ಶೆಟ್ಟಿ ಉಪಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ಗಾಣಿಗರ ಸಂಘ ಬೆಂಗಳೂರು,ವಿಶ್ವಾಸ ದಾಸ್ ಜಿಲ್ಲಾಧ್ಯಕ್ಷರು ಗಾಣಿಗರ ಸಂಘ ದಕ್ಷಿಣ ಕನ್ನಡ , ಶಂಕರ ಪಾಟಾಳಿ ಪರಿವಾರಕಾನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ, ಸಂಚಾಲಕರು ಸ್ವಾಗತ ಸಮಿತಿ ಗಾಣಿಗ ಸಮ್ಮಿಲನ, ಅಪ್ಪು ಪಾಟಾಳಿ ಜಯನಗರ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಪತ್ತೂರು, ಮಹಾಲಿಂಗ ದೇರೆಬೈಲು ನಿವೃತ್ತ ಉಪ ತಹಶೀಲ್ದಾರರು, ಮಂಗಳೂರು, ಚಂದ ಕುಡೆಕಲ್ಲು ಕರಣಿಕರು, ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರ ಕುಂಬಳೆ, ಮಹಾಲಿಂಗನ್ ಬಾಜರ್ತೊಟ್ಟಿ ಸಂಘದ ಅಂತರಿಕ ಲೆಕ್ಕ ಪರಿಶೋಧಕರು
,ಪ್ರೀತಂ ಕೆ ಎಸ್ ನಿರ್ದೇಶಕರು, ಸ್ವಿಗ್ಗಿ ಇಂಡಿಯಾ, ದಯಾನಂದ ಕೆ FCN ಚಾರ್ಟೆಡ್ ಅಕೌಂಟ್, ಬೆಂಗಳೂರು ಗೌರವ ಅಥಿತಿಗಳಾಗಿ ರಾಮ ಮುಗೋಡಿ ಅಧ್ಯಕ್ಷರು, ವಾಣಿಯ ಗಾಣಿಗ ಸಂಘ ಮಂಗಳೂರು, ಪ್ರಸಾದ್ ಬಾಕಿಮಾ ಅಧ್ಯಕ್ಷರು, ವಾಣಿಯ ಗಾಣಿಗ ಸಂಘ ಪುತ್ತೂರು , ಉದಯ ದಂಬೆ ಆಧ್ಯಕ್ಷರು, ವಾಣಿಯ ಗಾಣಿಗ ಸಂಘ ವಿಟ್ಲ, ಮಹಾಲಿಂಗ ಈಶ್ವರಮಂಗಲ ಅಧ್ಯಕ್ಷರು, ವಾಣಿಯ ಗಾಣಿಗ ಸಂಘ ಈಶ್ವರಮಂಗಲ ಉಪಸ್ಥಿತರಲಿದ್ದಾರೆ ಅಲ್ಲದೇ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲ ಸಾಧನೆ ಮಾಡಿದ ಸಾಧಕರಾದ ಚಂದ ಕುಡೆಕಲ್ಲು ಪರಿಕರ್ಮಿಗಳು ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರ, ಮಾನ ಬಂಟಬೈಲು ಪ್ರಸಿದ್ಧ ನಾಟಿ ವೈದ್ಯರು, ಬಣ್ಣದ ಸುಬ್ರಾಯ ಸಂಪಾಜೆ ಯಕ್ಷಗಾನ ಕಲಾವಿದರು, ಸುಬ್ಬ ಪಾಟಾಳಿ ಕಾಂತಮಂಗಲ ಸಮಾಜ ಸೇವಾ ಕ್ಷೇತ್ರ,ನಿವೃತ್ತ ಯೋಧರಾದ ನಾರಾಯಣ ಕುತ್ತಮೊಟ್ಟೆ, ಚಂದ್ರಶೇಖರ ಬೆಳ್ಳಾರೆ, ಲೋಕೇಶ್ ಇರಂತ ಮಜಲು, ದಿನೇಶ್ ನಾರ್ಣಕಜೆ ಆರಕ್ಷಕರು, ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು, ನಾರಾಯಣ ಪಾಟಾಳಿ ಕೆ. ಅಧ್ಯಕ್ಷರು, ನ್ಯಾಯವಾದಿಗಳ ಸಂಘ, ಸುಳ್ಯ, ಚಂದ್ರಶೇಖರ ಕೇರ್ಪಳ ಅಧ್ಯಕ್ಷರು, ಶಿಕ್ಷಕರ ಸಂಘ ಸುಳ್ಯ ತಾಲೂಕು, ಪ್ರವೀಣ್ ಎ.ಎಸ್. ಜಯನಗರ ವಿಜ್ಞಾನಿಗಳು, ವನಿತಾ ಸಚಿತ್ ಪೆರಿಯಪ್ಪು ಕ್ರೀಡಾ ಕ್ಷೇತ್ರ, ಮನೋಜ್ ಕುಮಾರ್ ಸುಂತೋಡು ಕ್ರೀಡಾ ಕ್ಷೇತ್ರ ಹೀಗೆ ಗಾಣಿಗ ಸಮಾಜ ಸುಳ್ಯದ ಸಾಧನೆಗೈದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ಕಾರ್ಯಕ್ರಮದ ಮುಂಚಿತವಾಗಿ ಸೆ೨೪ ರಂದು ಸಮುದಾಯ ಬಂಧುಗಳಿಗೆ ಮುಕ್ತವಾಗಿ ಆಟೋಟಾ ಸ್ಪರ್ಧೆಗಳು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಈ ಕಾರ್ಯಕ್ರಮವನ್ನು ನಿವೃತ್ತ ಯೋಧ ಲೋಕೇಶ್ ಇರಂತಮಜಲು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು ಜಿಲ್ಲೆಯ ಎಲ್ಲಾ ವಾಣಿಯ ಸಮುದಾಯವನ್ನು ಒಟ್ಟು ಗೂಡಿಸಿ ಸುಳ್ಯದಲ್ಲಿ ಹಮ್ಮಿಕೊಂಡಿದ್ದು ಸುಮಾರು ೫೦೦೦ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸುರೇಶ್ ಕರ್ಲಪ್ಪಾಡಿ , ಮಹಾಲಿಂಗನ್ ಬಾಜರ್ತೊಟ್ಟಿ, ಚಂದ್ರಶೇಖರ ಪನ್ನೆ , ಗೋಪಾಲಕೃಷ್ಣ ಮೊರಂಗಲ್ಲು , ಕೇಶವ ಮೊರಂಗಲ್ಲು ,ಪ್ರವೀಣ್ ಜಯನಗರ , ರಾಧಾಕೃಷ್ಣ ಬೇರ್ಪಡ್ಕ , ಪ್ರೇಮ ಕುಡೆಕಲ್ಲು , ಶಂಕರ ಪಾಟಾಳಿ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು.