ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಸರಕಾರ ರಚಿಸಿ, ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದೆ. ಈ ಸಮಿತಿಯ ಅಧ್ಯಕ್ಷರಾಗಿ ಶಾಸಕರಾದ ಕು.ಭಾಗೀರಥಿ ಮುರುಳ್ಯ ಹಾಗೂ ಸದಸ್ಯರಾಗಿ ರಾಕೇಶ್ ರೈ ಕೆಡೆಂಜಿ, ಶ್ರೀಮತಿ ಭಾರತಿ ಉಳುವಾರು ಹಾಗೂ ಜಗದೀಶ್ ದಾಸನಕಜೆ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ತಹಶಿಲ್ದಾರ್ ಅವರನ್ನು ನೇಮಕಗೊಳಿಸಿ ಆದೇಶ ಮಾಡಿದೆ.
ಬಿಜೆಪಿಗೆ ಒಲಿದ ಭಾಗ್ಯ : ಸುಳ್ಯ ಕಾಂಗ್ರೆಸ್ ನ ಅಂತರಿಕ ಕಲಹದಿಂದಾಗಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗುವ ಭಾಗ್ಯ ಬಿಜೆಪಿ ಪಾಲಾಗಿದೆ. ಅಧ್ಯಕ್ಷರಾಗಿ ಆ ಕ್ಷೇತ್ರದ ಶಾಸಕರೇ ಆಯ್ಕೆಯಾಗುತ್ತಾರೆ. ಆದರೇ ಈ ಬಾರಿ ಕಾಂಗ್ರೆಸ್ ನ ಪ್ರಮುಖರಿಗೆ ಸಮಿತಿಯ ಸದಸ್ಯರಾಗುವ ಅವಕಾಶವಿತ್ತು. ಈ ಬಗ್ಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಬಿರುಸಿನ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.
- Thursday
- November 21st, 2024