ಗೂನಡ್ಕದಲ್ಲಿ ನಿನ್ನೆ ತಡರಾತ್ರಿ ಗೋಕಳ್ಳತನವಾದ ಗೂನಡ್ಕದ ವರದರಾಜ್ ಸಂಕೇಶ್ ರವರ ಮನೆಗೆ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಪೈಕ, ಬಜರಂಗದಳ ತಾಲೂಕು ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ, ಮೊಸರು ಕುಡಿಕೆ ಉತ್ಸವ ಸಮಿತಿಯ ಉಪಾಧ್ಯಕ್ಷ ರಜತ್ ಅಡ್ಕಾರ್ , ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲತ್ತಡ್ಕ. ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದು ಮನೆಯವರಿಗೆ ಧೈರ್ಯ ತುಂಬಿದರು. ಹಾಗೂ ಈ ಬಗ್ಗೆ ಪೋಲಿಸ್ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆದಷ್ಟು ಶೀಘ್ರದಲ್ಲಿ ಕಳುವಾದ ದನಗಳು ಹಾಗೂ ಗೋಕಳ್ಳರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಭಜರಂಗದಳ ಮುಖಂಡರಿಂದ ಪೋಲಿಸ್ ಇಲಾಖೆಗೆ ಆಗ್ರಹ.
ಗೂನಡ್ಕದ ವರದರಾಜ್ ಸಂಕೇಶ್ ರವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಕಳ್ಳರು ಕದ್ದೊಯ್ದಿದ್ದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು ಮತ್ತು ಇಂತಹ ಘಟನೆಗಳು ಇನ್ನು ಮುಂದೆ ಮರುಕಳಿಸದಂತೆ ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದರ ಬಗ್ಗೆ ಉಗ್ರ ಹೋರಾಟ ನಡೆಸಲಿದೆ. ಇಂತಹ ಘಟನೆಗಳು ಹಿಂದೂ ಸಮಾಜವನ್ನು ಬೆದರಿಸುವ ತಂತ್ರವಾಗಿದೆ ಆದರೆ ಹಿಂದೂ ಸಮಾಜ ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಮಾಜಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಿದೆ.ಪೋಲಿಸ್ ಇಲಾಖೆಯ ಬಗ್ಗೆ ನಮಗೆ ವಿಶ್ವಾಸವಿದೆ ಆದಷ್ಟು ಬೇಗ ಗೋಕಳ್ಳರನ್ನು ಪತ್ತೆ ಹಚ್ಚಬೇಕು ಮತ್ತು ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತೆವೆ ಎಂದು ಭಜರಂಗದಳ ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ ತಿಳಿಸಿದ್ದಾರೆ.