ಆಲೆಟ್ಟಿ ಗ್ರಾಮದ ಗುಂಡ್ಯದ ಜನನಿ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಪ್ರಥಮ ವರುಷದ ಮೊಸರು ಕುಡಿಕೆ ಉತ್ಸವದ ಅದ್ದೂರಿಯ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆಯು ಸೆ.10 ರಂದು ಆಲೆಟ್ಟಿ ಯಲ್ಲಿ ನಡೆಯಿತು.
ಅಪರಾಹ್ನ ನಾರ್ಕೋಡು ಶ್ರೀ ಸದಾಶಿವ ದ್ವಾರದ ಬಳಿಯಿಂದ ಉತ್ಸವದ ಶೋಭಾಯಾತ್ರೆಗೆ ಕುಡೆಕಲ್ಲು ಮೇದಪ್ಪ ಗೌಡ, ಕಾಂಪ್ಲೆಕ್ಸ್ ಮಾಲಕ ಉದಯ ಕುಡೆಕಲ್ಲು ರವರು ಚಾಲನೆ ನೀಡಿದರು. ಯುವಕರ ತಂಡವು ಪಿರಮಿಡ್ ರಚಿಸಿಕೊಂಡು ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಸ್ಪರ್ಧೆಯಲ್ಲಿ ಭಾಗವಹಿಸಿದರು. ನಾರ್ಕೋಡು ದ್ವಾರದ ಬಳಿಯಿಂದ ಹೊರಟ ಶೋಭಾಯಾತ್ರೆ ಆಲೆಟ್ಟಿ ಸದಾಶಿವ ದೇವಸ್ಥಾನದ ವಠಾರಕ್ಕೆ ಸಾಗಿ ಬಂತು. ಆಲೆಟ್ಟಿ ಸೊಸೈಟಿಯ ಎದುರಿನ ಆವರಣದಲ್ಲಿ ಧಾರ್ಮಿಕ ಸಭೆ ಹಾಗೂ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಲತೀಶ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣ ಮಾಡಿದರು. ಇಂಜಿನಿಯರ್ ಗಿರೀಶ್ ನಾರ್ಕೋಡು ದೀಪ ಪ್ರಜ್ವಲಿಸಿದರು. ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ ಆಲೆಟ್ಟಿ, ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಮಾಜಿಸದಸ್ಯಸೀತಾರಾಮ ಕೊಲ್ಲರಮೂಲೆ, ಯುವ ಉದ್ಯಮಿ ಶ್ರೀನಾಥ್ ಆಲೆಟ್ಟಿ, ನ್ಯಾಯವಾದಿ ಜಗದೀಶ್ ಕಾಪುಮಲೆ, ರಾಮಚಂದ್ರ ಆಲೆಟ್ಟಿ, ಮಧು ಕಿರಣ್ ಸುಳ್ಯ, ಮಲ್ಲೇಶ್ ಕುಡೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಅನ್ನಪೂರ್ಣ ಇಲೆಕ್ಟ್ರಿಕಲ್ಸ್ ಸುಳ್ಯ, ವೀರ ಕೇಸರಿ ಮುಳ್ಯ ಅಟ್ಲೂರು ದ್ವಿತೀಯ ಪ್ರಶಸ್ತಿ ಗಳಿಸಿಕೊಂಡಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.