ಸುಳ್ಯ ಕಾಂಗ್ರೆಸ್ ನ ಪೇಪರ್ ಹುಲಿ ಮಾನ್ಯ ಪುಡಾರಿಗಳೇ…. ಮೋದಿ ಸರಕಾರದ ಹತ್ತಾರು ಯೋಜನೆಗಳ ಸವಲತ್ತುಗಳನ್ನು ಬಾಚಿ… ಬಾಚಿ ತೆಗೆದುಕೊಂಡಾಗ ನಿಮಗಿಲ್ಲದ ನಾಚಿಕೆ …. ರಾಜ್ಯ ಸರಕಾರದ ಒಂದೆರಡು ಭಾಗ್ಯಗಳನ್ನು ಪಡೆದುಕೊಂಡಾಗ ಬಿಜೆಪಿ ಕಾರ್ಯಕರ್ತರಿಗೇಕೆ ನಾಚಿಕೆ ಆಗಬೇಕು…. ? ನಮ್ಮೆಲ್ಲರ ತೆರಿಗೆ ದುಡ್ಡಿನ ಸವಲತ್ತಲ್ಲವೇ…ಈ ದೇಶದಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆಯಲು ಸರ್ವರೂ ಅರ್ಹರು, ಭಾಧ್ಯಸ್ಥರು . ನಮ್ಮ ಅಡಿಕೆ ಬೆಳೆಗೆ ಉತ್ತಮ ಗೌರವಯುತ ಧರ, ಮಾನ ಬಂದಿರುವುದೇ ಕೇಂದ್ರದಲ್ಲಿ ಬಿಜೆಪಿ ಸರಕಾರದಿಂದ. ಕೇಂದ್ರದಲ್ಲಿ ನಿಮ್ಮ ಕಾಂಗ್ರೆಸ್ ಸರಕಾರ ಇದ್ದಾಗ ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಅಂಶ ಇದೆ ಎಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದವರಲ್ಲವೇ , ಆಗ ಅದನ್ನು ವಿರೋಧಿಸದೆ ಅವಿತು ಕುಳಿತವರು ತಾವೇ ಅಲ್ಲವೇ ಸುಳ್ಯದ ಕಾಂಗ್ರೆಸ್ ಪುಡಾರಿಗಳೇ…. ಅಡಿಕೆ ಹಳದಿ ರೋಗದ ಪರಿಹಾರಕ್ಕೆ ರೂಪಾಯಿ 25 ಕೋಟಿ ಪ್ಯಾಕೇಜ್ ಮಂಜೂರು ಮಾಡಿದವರು ,ಸಂಶೋಧನೆಗೆ ಅನುದಾನ ಮೀಸಲಿರಿಸಿದ್ದು ಹಿಂದಿನ ಬಿಜೆಪಿ ಸರಕಾರ. ಅದಕ್ಕಿಂತ ಮೊದಲು ಇದ್ದ ಕಾಂಗ್ರೆಸ್ ಪಾಲುದಾರಿಕೆಯ ಸಮ್ಮಿಶ್ರ ಸರಕಾರ, ಅದಕ್ಕೂ ಮೊದಲಿದ್ದ ಸಿದ್ದರಾಮಯ್ಯ ಸರಕಾರ ಅಡಿಕೆ ಹಳದಿ ರೋಗ ಪರಿಹಾರಕ್ಕೆ ಏನು ಕಡಿದು ಗುಡ್ಡೆ ಹಾಕಿತ್ತು ಒಂಚೂರು ಹೇಳಿ ಸುಳ್ಯದ ಪೇಪರ್ ಹುಲಿ, ಕಾಂಗ್ರೆಸ್ಸಿಗರೇ…. ನಿಮ್ಮ ಬಗ್ಗೆ ಮರುಕವಾಗುತ್ತಿದೆ ಗೋಶಾಲೆ ಮತ್ತು ಗೋಮಾಳಕ್ಕೆ ವ್ಯತ್ಯಾಸ ಗೊತ್ತಿಲ್ಲದ ಅಜ್ಞಾನದ ಬಗ್ಗೆ , ನಮ್ಮ ಶಾಸಕರು ಗೋಶಾಲೆಗೆ ಅನುದಾನ ತರುವ ಕೆಲಸ ಮಾಡುತ್ತಾರೆ ಆದರೆ ತಾಲೂಕಿಗೊಂದು ಗೋಶಾಲೆ ಯೋಜನೆಯನ್ನೇ ರದ್ದುಗೊಳಿಸಿ ಸರಕಾರ ಯಾವ ಆಧಾರದಲ್ಲಿ ಅನುಧಾನ ಬಿಡುಗಡೆಗೊಳಿಸುತ್ತೆ ಸ್ವಾಮಿ….. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ನಿಮ್ಮ ಬ್ರದರ್ಸ್ ಗಳನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ ಘನಂಧಾರಿ ಸರಕಾರ ನಿಮ್ಮದಲ್ಲವೇ…. ಕಾಂಗ್ರೆಸ್ಸಿಗರೇ ವಿರೋಧ ಪಕ್ಷದ ನಾಯಕನ ಆಯ್ಕೆ ಇಂದಲ್ಲ ನಾಳೆ ಮಾಡುತ್ತೇವೆ, ನಮ್ಮ ಎಲ್ಲಾ ಶಾಸಕರೇ ನಿಮಗೆ ಸಮರ್ಥವಾಗಿ ವಿರೋಧ ಪಕ್ಷದ ನಾಯಕನಾಗಿ ಟಾಂಗ್ ಕೊಡ್ತಾ ಇದ್ದಾರೆ . ಅದಿರ್ಲಿ 100 ದಿನ ದಾಟಿದ್ರು ಟೇಕಾಫ್ ಆಗದ ನಿಮ್ಮ ಸರಕಾರ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸಲಾಗದೆ ಚಡಪಡಿಸುತ್ತಿರುವ ಆಡಳಿತ ವ್ಯವಸ್ಥೆ , ನಿಮ್ಮ ಶಾಸಕರೇ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿ , ಮಂತ್ರಿಗಳ ವಿರುದ್ಧ ಬಹಿರಂಗ ಅಸಮಾಧಾನ ,ಪತ್ರ ಸಮರ ಮಾಡುತ್ತಿರುವಾಗ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿರುವಾಗ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡದೆ ಇನ್ನೇನು ಸನ್ಮಾನ ಮಾಡಬೇಕೆ..? ನಮ್ಮ ಸುಳ್ಯ ಬಿಜೆಪಿ ಅಧ್ಯಕ್ಷರು ನಿಮ್ಮ ಹಾಗೆ ಬೊಗಳೆ ಪೇಪರ್ ಹುಲಿ ನಾಯಕರಲ್ಲ ……ಕೆಲಸ ಮಾಡಿ ತೋರಿಸಿ ಅಬ್ಬರಿಸುವ ಹುಲಿ ನೆನಪಿರಲಿ ಕಾಂಗ್ರೆಸ್ಸಿಗರೇ..,… ಉಚ್ಚಾಟಿತರಾಗಿ, ಶೋಕಾಸ್ ನೋಟಿಸ್ ಜಾರಿಯಾಗಿ ನಿರೀಕ್ಷಣಾ ಜಾಮೀನು ಪಡೆದವರಂತೆ ತ್ರಿಶಂಕು ಸ್ಥಿತಿಯಲ್ಲಿರುವ ವ್ಯಾಲಿಡಿಟಿ ಮುಗಿದಿರುವ ಸುಳ್ಯ ಕಾಂಗ್ರೆಸಿಗರೇ ಅಯ್ಯೋ ಪಾಪ ನಿಮ್ಮ ದುರವಸ್ಥೆಯೇ…. ಭಗವಂತನೇ ಕಾಪಾಡಬೇಕು ನಿಮ್ಮನ್ನು.. *-ಸುಳ್ಯ ಬಿಜೆಪಿ*
- Sunday
- November 24th, 2024