

ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಶಕ್ತಿಯೋಜನೆ , ಗೃಹಲಕ್ಷ್ಮಿ ಮುಂತಾದ ಯೋಜನೆಗಳನ್ನು ಪಡೆದುಕೊಳ್ಳಲು ಬಿಜೆಪಿ ಕಾರ್ಯಕರ್ತರಿಗೆ ನಾಚಿಕೆ ಆಗಲ್ಲವೇ ಎಂದು ಹೇಳಿದ್ದಾರೆ ಆದರೆ ಅದು ನಮ್ಮದೇ ತೆರಿಗೆ ಹಣದಿಂದ ನೀಡುತ್ತಿರುವುದು ನಿಮ್ಮ ಮನೆಯ ಅಡಿಕೆ ಮಾರಾಟ ಮಾಡಿದ ಹಣದಿಂದ ನಮಗೆ ನೀಡುತ್ತಿಲ್ಲಾ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪಿ ಸಿ ಜಯರಾಮ ಮತ್ತು ಕಾರ್ಯದರ್ಶಿ ಪಿ ಎಸ್ ಗಂಗಾಧರರ ಹೆಸರನ್ನು ಪ್ರಸ್ತಾಪಿಸಿ ಅವರ ವಿರುದ್ದ ಕಿಡಿ ಕಾರಿದರು. ನಾವು ನಮ್ಮ ಶಾಸಕರು ಮತ್ತು ಸಚಿವರ ಸಂದರ್ಭದಲ್ಲಿ ತಂದಂತಹ ಅನುಧಾನವನ್ನು ಇದೀಗ ಕಾಂಗ್ರೆಸ್ ತಂದಿದೆ ಎಂದು ಹೇಳುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಸುಳ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ್ತು INDA ಒಕ್ಕೂಟವು ಮೋದಿಜಿ ನೀಡಿದ ಸವಲತ್ತುಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ ನಾವು ಸಿದ್ದರಿದ್ದೇವೆ ನಾವು ಹೇಳಲು ಹೊರಟರೆ ಸುಮಾರು ೩೦ ದಿನಗಳು ಬೇಕಾಗಬಹುದು ಅಷ್ಟು ಕಾರ್ಯಗಳನ್ನು ಮಾತನಾಡದೇ ಮಾಡುಂದು ಹೇಳಿದರು.ಪ್ರತಿಭಟನಾ ಸಭೆಯ ನಿರೂಪಣೆಯನ್ನು ವಿನಯ ಕುಮಾರ್ ಕಂದಡ್ಕ ಸ್ವಾಗತವನ್ನು ರಮೇಶ್ ಕಲ್ಪುರೆ , ಧನ್ಯವಾದ ವನ್ನು ಮಹೇಶ್ ಕುಮಾರ್ ರೈ ಮೇನಾಲ ನಡೆಸಿದರು ಬಳಿಕ ಉಪತಾಹಶೀಲ್ದಾರ್ ಮಂಜುನಾಥ್ ರವರಿಗೆ ಬಿಜೆಪಿ ನಿಯೋಗವು ತೆರಳಿ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡರಾದ ಎಸ್ ಎನ್ ಮನ್ಮಥ , ಸುಬೋದ್ ಶೆಟ್ಟಿ ಮೇನಾಲ , ಸುಭಾದಾ ಎಸ್ ರೈ , ಪುಸ್ಪಾವತಿ ಬಾಳಿಲ , ಜಾಹ್ನವಿ ಕಾಂಚೋಡು , ಮೊನಪ್ಪ ಗೌಡ , ಸಂತೋಷ್ ಕುತ್ತಮೊಟ್ಟೆ , ವಿನೋದ್ ಬಿಳಿಯಾರು, ಕೃಷ್ಣಯ್ಯ ಮೂಲೆತೋಟ , ಶೀಲಾವತಿ , ಶಶಿಕಲಾ , ಕಿಶೋರಿ ಸೇಟ್ , ಬುದ್ದನಾಯ್ಕ , ರಾಮ ಪಾಣತ್ತಿಲ , ಬಾಲಗೋಪಾಲ ಸೇರ್ಕಜೆ , ಸೀನಪ್ಪ ಬಯಂಬು, ಕೇಶವ ಮಾಸ್ತರ್ , ಬಾಲಕೃಷ್ಣ ರೈ , ದಯಾನಂದ ಕುರುಂಜಿ , ಕಿರಣ್ ಕುರುಂಜಿ , ಧನಂಜಯ ಎರ್ಮೆಟ್ಟಿ , ಸುಧಾಕರ , ಚಂದ್ರಶೇಖರ ಕೇರ್ಪಳ್ಳ , ಕರುಣಾಕರ ಹಾಸ್ಪಾರೆ , ಸುಪ್ರಿತ್ ಮೋಂಟಡ್ಕ , ಚನಿಯ ಕಲ್ತಡ್ಕ , ಗುರುದತ್ತ್ , ಕುಶಾಲಪ್ಪ ಪೆರುವಾಜೆ , ಜಗದೀಶ್ ಅರಂಬೂರು , ಸುನೀಲ್ ಕೇರ್ಪಳ್ಳ , ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.