ರಾಜ್ಯ ಸರಕಾರದ ರೈತ ಹಾಗೂ ಜನ ವಿರೋಧಿ ನಿಲುವು ಖಂಡಿಸಿರುವ ಬಿಜೆಪಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಣೆ ಮಾಡುವಂತೆ ಆಗ್ರಹಿಸಿ ಸುಳ್ಯ ತಾಲೂಕು ಕಛೇರಿ ಮುಂಬಾಗದಲ್ಲಿ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ರಾಕೇಶ್ ರೈ ಕೆಡೆಂಜಿ ಪ್ರಾಸ್ತಾವಿಕ ವಾಗಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯರು ಮಾಧ್ಯಮದವರ ಪ್ರಶ್ನೆಗಳಿಗೆ ದಬ್ಬಾಳಿಕೆ ಮಾದರಿಯಲ್ಲಿ ಮಾತನಾಡುತ್ತಾರೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಹೇಳಿದರು. ಇದೀಗ ರಾಜ್ಯದಲ್ಲಿ ಮಳೆಯ ಕೊರತೆಯಾಗಿದ್ದು ಕೆ ಆರ್ ಎಸ್ ಡ್ಯಾಂನಲ್ಲಿ ಕೊರತೆಯಾಗಿದ್ದು ಇದೀಗ ನೀರು ತಮಿಳು ನಾಡಿಗೆ ನೀರು ಬಿಡುತ್ತಿರುವುದು ಸರಿಯಲ್ಲ ಎಂದು ಹೇಳಿದರು ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಕ್ರಮವಾಗಿದೆ ಎಂದು ದೂರಿದರು. ಮೋದಿಯವರು ಮಾಧ್ಯಮಗಳ ಎದುರು ಮಾತನಾಡುವುದಿಲ್ಲಾ ಎಂದು ಪ್ರಕಾಶ್ ರಾಜ್ ಹೇಳುತ್ತಾರೆ. ಆದರೆ ಮೋದಿ ಮಾತುಗಳನ್ನಾಡದೆ ಕೆಲಸಗಳನ್ನು ಮಾಡಿ ತೋರಿಸುತ್ತಿದ್ದಾರೆ ಎಂದು ಹೇಳಿದರು . ರಾಜ್ಯದಲ್ಲಿ ಕಬ್ಬು ಬೆಳೆಯಬಾರದು ಶೇಂಗ ಬೆಳೆಯಬೇಕು ಎಂದು ಪ್ರಕಾಶ್ ರೈ ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಸರಕಾರ ಲೂಟಿ ಮಾಡುತ್ತಿದೆ ಎಂದು ಹೇಳಿದರು. ಸನಾತನ ಧರ್ಮವನ್ನು ಕೀಳು ಮಟ್ಟಕ್ಕೆ ಇಳಿಸುವ ಮತ್ತು ನರೇಂದ್ರ ಮೋದಿಯನ್ನು ಕೆಳಗಿಳಬೇಕು ಪ್ರಯತ್ನಿಸುತ್ತಿರುವ ನೀವು, ನಿಮ್ಮ ಇಂಡಿಯಾ ಒಕ್ಕೂಟ ಕ್ಕೆ ತಾಕತ್ತು ಇದ್ದರೆ ಬಿಜೆಪಿಯನ್ನು ಸೋಲಿಸಿ ತೋರಿಸಿ ಎಂದು ಸವಾಲೆಸೆದರು.
- Thursday
- November 21st, 2024