ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲದ ನ್ಯಾಯಬೆಲೆ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಯೋರ್ವರು ತಮ್ಮ ಮನೆ ನಿರ್ಮಾಣದ ವೇಳೆಯಲ್ಲಿ ಮಣ್ಣು ಹಾಕಿ ಚರಂಡಿ ವ್ಯವಸ್ಥೆಯು ಮುಚ್ಚಿ ಹೊಗಿದ್ದವು ಇದರಿಂದಾಗಿ ಕಾಂತಮಂಗಲ ರಸ್ತೆಯು ಮಳೆ ಬಂದ ಸಂದರ್ಭದಲ್ಲಿ ಹೊಳೆಯಾಗಿ ಮಾರ್ಪಾಡು ಆಗುತ್ತಿದ್ದವು ಇದನ್ನು ಸ್ಥಳೀಯ ಪರಿಸರದ ವ್ಯಕ್ತಿಗಳು ಅಮರ ಸುಳ್ಯ ಸುದ್ದಿ ಬಳಗದ ಗಮನಕ್ಕೆ ತಂದಾಗ ವಿಸ್ತೃತವಾದ ವರದಿಯನ್ನು ಸೆ-10ರಂದು ಪ್ರಕಟಿಸಿತ್ತು. ಈ ವರದಿಯನ್ನು ಗಮನಿಸಿ ತಕ್ಷಣವೇ ಖಾಸಗಿ ವ್ಯಕ್ತಿಯೋರ್ವರು ಈ ಚರಂಡಿ ಮುಚ್ಚಿರುವುದನ್ನು ತೆರವು ಗೊಳಿಸಿ ಮಳೆ ನೀರು ಚರಂಡಿಗೆ ಹಾದು ಹೋಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಇದೀಗ ವಾಹನ ಸವಾರರು ನಿರಾಳರಾಗಿ ಸಂಚರಿಸಲು ಮುಕ್ತವಾಗಿದೆ .