ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ ಸೆ.9 ರಂದು ನಡೆಯಿತು.
ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಗುತ್ತಿಗಾರು, ದ್ವಿತೀಯ ಸ್ಥಾನ ಸೈಂಟ್ ಜೋಸೆಫ್ ಸುಳ್ಯ ಪಡೆದುಕೊಂಡಿತ್ತು. ಬಾಲಕಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಮೊರಾರ್ಜಿ ವಸತಿ ಶಾಲೆ ಪಂಜ , ದ್ವಿತೀಯ ಸ್ಥಾನವನ್ನು ಜ್ಞಾನದೀಪ ಶಾಲೆ ಎಲಿಮಲೆ ಪಡೆದುಕೊಂಡಿದೆ.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್ ಕಂಜಿಪಿಲಿ ಹಾಗೂ ಗ್ರಾ. ಪಂ. ಸುಬ್ರಹ್ಮಣ್ಯ ಇದರ ಉಪಾಧ್ಯಕ್ಷ ಎಚ್ ಎಲ್ ವೆಂಕಟೇಶ್ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್ , ತಾಲೂಕು ಕ್ರೀಡಾ ಸಂಯೋಜಕರಾದ ಸೂಫಿ ಪೆರಾಜೆ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ಮೆರ್ಕಜೆ , ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಉಪಸ್ಥಿತರಿದ್ದರು.
ಪಂದ್ಯಾಟವನ್ನು ಜಿಲ್ಲಾ ಅಮೆಚೂರು ಕಬಡ್ಡಿ ತೀರ್ಪುಗಾರರ ಸಂಘದ ಅಧ್ಯಕ್ಷರಾದ ಶಿವರಾಮ ಏನೇಕಲ್ಲು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಜಾತ ಆಚಾರ್ಯ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ನಾರಾಯಣ ಅಗ್ರಹಾರ, ಶ್ರೀಮತಿ ಭಾರತಿ ದಿನೇಶ್ ಉಪಸ್ಥಿತರಿದ್ದರು.