Ad Widget

ಸುಳ್ಯ ಬಾಲಗೋಕುಲ ಪ್ರಶಿಕ್ಷಣ ವರ್ಗ.

ಸುಳ್ಯ ನಿವೇದಿತಾ ‌ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)/ಸುಳ್ಯತಾಲೂಕು ಇದರ ವತಿಯಿಂದ‌ ಬಾಲಗೋಕುಲ ಪ್ರಶಿಕ್ಷಣ ವರ್ಗವು ಸುಳ್ಯದ ಅಮೃತ ಭವನ ಸಭಾಭವನದಲ್ಲಿ ನಡೆಯಿತು.ಬಾಲಗೋಕುಲ ಪ್ರಶಿಕ್ಷಣ ವರ್ಗವನ್ನು ಜಿಲ್ಲಾ ಪ್ರಮುಖರಾದ ವಸಂತ ಕಾಟಿಪಳ್ಳ ನಡೆಸಿಕೊಟ್ಟರು ವೇದಿಕೆಯಲ್ಲಿ ಟ್ರಸ್ಟ್ ನ ಅದ್ಯಕ್ಷರಾದ‌ ಇಂದಿರಾ ರಾಜಶೇಖರ್ ಉಪಸ್ಥಿತರಿದ್ದರು. ಮಾತಾಜಿಯರಾದ ರೋಹಿಣಿ ಎಲಿಮಲೆ ವಿದ್ಯಾಲಕ್ಷ್ಮಿ ಪುತ್ತೂರು, ವಿಮಲ ಸವಣೂರು ಬಾಲಗೋಕುಲ ನಡೆಸುವ...

ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಬಾಳಿಲ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

ವಿದ್ಯಾಬೋಧೀನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಸೆ.08ರಂದು ನಡೆದ ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯು ಅತ್ಯುತ್ತಮ ಪ್ರದರ್ಶನ ನೀಡಿ ಕಿರಿಯ ವಿಭಾಗ ಹಾಗೂ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದಿರುತ್ತದೆ.
Ad Widget

ಸುಬ್ರಹ್ಮಣ್ಯ : ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಬಡ್ಡಿ ಪಂದ್ಯಾಟ – ಬಾಲಕರ ವಿಭಾಗದಲ್ಲಿ ಗುತ್ತಿಗಾರು ಪ್ರಥಮ, ಬಾಲಕಿಯರ ವಿಭಾಗದಲ್ಲಿ ಮೊರಾರ್ಜಿ ಪಂಜ ಪ್ರಥಮ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ ಸೆ.9 ರಂದು ನಡೆಯಿತು. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸ.ಹಿ.ಪ್ರಾ.ಶಾಲೆ ಗುತ್ತಿಗಾರು, ದ್ವಿತೀಯ ಸ್ಥಾನ ಸೈಂಟ್ ಜೋಸೆಫ್ ಸುಳ್ಯ ಪಡೆದುಕೊಂಡಿತ್ತು. ಬಾಲಕಿಯ ವಿಭಾಗದಲ್ಲಿ ಪ್ರಥಮ ಸ್ಥಾನ...

ಅಮ್ಮ ಚಿಣ್ಣರ ಮನೆಯಲ್ಲಿ ಕೃಷ್ಣ- ರಾಧೆಯರ ಕಲರವ : ಭಾಗವಹಿಸಿದ 48 ಸ್ಪರ್ಧಿಗಳು

ಸುಳ್ಯದ ಅಮ್ಮ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ಮುದ್ದು ರಾಧಾ ಸ್ಪರ್ಧೆ ಸೆ.10 ರಂದು ಅಮ್ಮ ಚಿಣ್ಣರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಸುಳ್ಯದ ದಂತ ವೈದ್ಯೆ ಡಾ. ವಿದ್ಯಾ ಶಾರದ ನೆರವೇರಿಸಿ ಶುಭಹಾರೈಸಿದರು. ಬಹುಮಾನ ವಿತರಣೆಯನ್ನು ಸವಣೂರು ವಿದ್ಯಾರಶ್ಮಿ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ ಕೇವಳ ನೆರವೇರಿಸಿದರು....

ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಕುರಿತ ಧ್ವನಿಸುರುಳಿ ಬಿಡುಗಡೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವರ ಕುರಿತ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ. 10ರಂದು ನಡೆಯಿತು. ಧ್ವನಿ ಸುರಳಿಯನ್ನು ಕ್ಷೇತ್ರದ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಧ್ವನಿಸುರುಳಿಗೆ ಸಾಹಿತ್ಯ ಒದಗಿಸಿದ ಪೆರುಮಾಳ್ ಲಕ್ಷ್ಮಣ ಐವರ್ನಾಡು, ಗಾಯಕಿ ಪುಷ್ಪಾವತಿ ಆರ್. ಡಿ,ದೇವಸ್ಥಾನದ ಅರ್ಚಕರಾದ ಪದ್ಮನಾಭ ಭಟ್,ನವೀನ ಚಾತುಬಾಯಿ,...

ಅವೈಜ್ಞಾನಿಕವಾಗಿ ಖಾಸಗಿ ವ್ಯಕ್ತಿಗಳಿಂದ ಚರಂಡಿ ಮುಚ್ಚಿ ರಸ್ತೆ ನಿರ್ಮಾಣ – ಮಳೆನೀರು ರಸ್ತೆಯಲ್ಲಿಯೇ ಹರಿದು ಸಾರ್ವಜನಿಕರಿಗೆ ತೊಂದರೆ…

ಕಾಂತಮಂಗಲ ವೃತ್ತದ ಬಳಿಯಲ್ಲಿ ರಸ್ತೆ ನಿರ್ಮಾಣದ ವೇಳೆ ಸುಸಜ್ಜಿತ ಚರಂಡಿ ವ್ಯವಸ್ಥೆ ಮಾಡಿದ್ದರು. ಇಲ್ಲಿ ಖಾಸಗಿಯವರು ಸಂಪರ್ಕ ರಸ್ತೆ ನಿರ್ಮಾಣದ ವೇಳೆ ಚರಂಡಿ ಮುಚ್ಚಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಕಾಂತಮಂಗಲದ ನ್ಯಾಯಬೆಲೆ ಅಂಗಡಿ ಬಳಿ ಚರಂಡಿ ಮುಚ್ಚಿ ಅವೈಜ್ಞಾನಿಕವಾಗಿ ರಸ್ತೆ ಮಾಡಿರುವುದರಿಂದ...

ಬೆಳಂದೂರು: ಪ್ರಥಮ ದರ್ಜೆ ಕಾಲೇಜಿಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ – ಬೇಡಿಕೆಗಳಿಗೆ ಸ್ಪಂದನೆ

ಬೆಳಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಸೆ.9 ರಂದು ಭೇಟಿ ನೀಡಿ ಕಾಲೇಜು ಕೊಠಡಿಗಳನ್ನು ವೀಕ್ಷಣೆ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಂಕರ ಭಟ್ ರವರು ಹಲವು ಬೇಡಿಕೆಗಳನ್ನು ಮುಂದಿಟ್ಟರು. ಬಳಿಕ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಕಾಲೇಜಿನ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ...

ತಾಲೂಕು ಮೊಗೇರ ಯುವ ವೇದಿಕೆ (ರಿ) ಸುಳ್ಯ, ಕೆಸರು ಗದ್ದೆ ಕ್ರೀಡಾಕೂಟ

https://youtu.be/xSR0fWOjw3I?si=8_Jri0-jbtGWDCQe ತಾಲೂಕು ಮೊಗೇರ ಯುವ ವೇದಿಕೆ (ರಿ) ಸುಳ್ಯ ಕೆಸರು ಗದ್ದೆ ಕ್ರೀಡಾಕೂಟವು ಅಜ್ಜಾವರ ಗ್ರಾಮದ ಬೆಳಂತಿಮಾರ್ ಮೇನಾಲದಲ್ಲಿ ಜರುಗುತ್ತಿದ್ದು ಕ್ರೀಡಾಕೂಟವನ್ನು ಸುಶೀಲ ರೈ ಮೇನಾಲ ಸ್ಥಳದಾನಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ , ಪ್ರಸಾದ್ ರೈ ಮೇನಾಲ ಸದಸ್ಯರು ಗ್ರಾಮ ಪಂಚಾಯತ್ ಅಜ್ಜಾವರ,ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ , ಲಕ್ಷ್ಮಣ ಪಾರೆ...

ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿ- ಎಣ್ಮೂರು ಸರಕಾರಿ ಪ್ರೌಢ ಶಾಲೆಗೆ ಸಮಗ್ರ ಪ್ರಶಸ್ತಿ

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ಸೆಪ್ಟೆಂಬರ್ 9ರಂದು ನಡೆದ ಪ್ರೌಢ ಶಾಲಾ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸರಕಾರಿ ಪ್ರೌಢ ಶಾಲೆ ಎಣ್ಮೂರು ದ್ವಿತೀಯ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು. ಭಾವಗೀತೆಯಲ್ಲಿ ರಾಜೇಶ್ವರಿ ರೈ ಪ್ರಥಮ, ಮಿಮಿಕ್ರಿ ಯಲ್ಲಿ ವಿನ್ಯಾಸ್ ಜಾಕೆ ಪ್ರಥಮ, ರಸಪ್ರಶ್ನೆ ಯಲ್ಲಿ ಸಾಕ್ಷಿ...

ಸೆ.10 : ಮಡಪ್ಪಾಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಯುವಕ ಮಂಡಲ (ರಿ) ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ (ರಿ) ಮಡಪ್ಪಾಡಿ, ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ(ರಿ) ಮಡಪ್ಪಾಡಿ.ಶಾಲಾಭಿವೃದ್ಧಿ ಸಮಿತಿ ಮಡಪ್ಪಾಡಿ ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಕಾರ್ಯಕ್ರಮದಲ್ಲಿ ಇಂದು ಸೆ 10 ಆದಿತ್ಯವಾರದಂದು ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇದರ ಆಟದ ಮೈದಾನದಲ್ಲಿ ನಡೆಯಲಿದೆ.ಬೆಳಿಗ್ಗೆ...
Loading posts...

All posts loaded

No more posts

error: Content is protected !!