Ad Widget

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ ವಾರ್ಷಿಕ ಮಹಾಸಭೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ ಇದರ ವಾರ್ಷಿಕ ಮಹಾಸಭೆ ಸಹಕಾರಿ ಸಂಘ ಅಧ್ಯಕ್ಷರಾದ ಪಿ.ಸಿ.ಜಯರಾಮ ಇವರ ಅಧ್ಯಕ್ಷತೆಯಲ್ಲಿ 09-09-2023 ಶನಿವಾರ ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ಜರುಗಿತು.

. . . . . . . . .

2022-23ನೇ ಸಾಲಿನಲ್ಲಿ ರೂ.126.830ಕೋಟಿ ವ್ಯವಹಾರ ನಡೆಸಿ ರೂ.33.23 ಲಕ್ಷ ಲಾಭ ಗಳಿಸಿರುತ್ತದೆ.ಈ ವರುಷ ಸಂಘದ ಸದಸ್ಯರುಗಳಿಗೆ 10% ಶೇಕಡಾ ಡಿವಿಡೆಂಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಠರಾವುಗಳ ಮೇಲೆ ಚರ್ಚೆ ನಡೆಯಿತು, ಕಳೆದ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು, ಸಂಘದ ವತಿಯಿಂದ ಮಡಪ್ಪಾಡಿ ಗ್ರಾಮದ ದೂರವಾಣಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ, ಸಂಘದ ನಿರ್ದೇಶಕರುಗಳಾದ ಸೋಮಶೇಖರ ಕೆ, ಅಜಯ್ .ವಿ.ಸಿ, ರಾಜಕುಮಾರ.ಪಿ.ಬಿ, ಪ್ರವೀಣ ಯತೀಂದ್ರನಾಥ್,ಕುಂಞಕ್ಕ.ಸಿ.ಯಚ್, ವಿಶ್ವನಾಥ.ಸಿ.ಯಚ್,ಪೇರಪ್ಪ ಯಚ್,ಶೇಖರ್.ಕೆ.ಪಿ,ಮನೋಜ್ ಕುಮಾರ್.ಎಂ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು, ಸಂಘದ ಸದಸ್ಯರುಗಳು ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading