ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಸೆ. 07 ರಂದು ಸರಕಾರಿ ಪ್ರೌಢಶಾಲೆ ಏನೆಕಲ್ಲಿನಲ್ಲಿ ಶಿಕ್ಷಕರ ದಿನಾಚರಣೆ, ಸನ್ಮಾನ ಹಾಗೂ ಸೇವಾ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು, ಸನ್ಮಾನವನ್ನು ಲl ಮಾದವ ಗೌಡ ಜಾಕೆ ,ಹಾಗೂ ಲlಲೀಲಾ ಮಾದವ ಗೌಡ ಜಾಕೆ ಇವರು ನೆರವೇರಿಸಿದರು. ಏನಕಲ್ಲಿನ ಸರ್ಕಾರಿ ಪ್ರೌಢಶಾಲೆ ಕಳೆದ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ತಾಲೂಕಿನಲ್ಲೇ ಶೇಕಡ 100% ಫಲಿತಾಂಶ ಬಂದಿರುವ ಏಕೈಕ ಶಾಲೆಯಾಗಿದ್ದು, ಶಾಲೆಯ ಎಲ್ಲಾ ಶಿಕ್ಷಕರನ್ನ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಿಲೀಪ್ ಬಾಬ್ಲು ಬೆಟ್ಟು ರವರು ಗೌರವಿಸಿದರು, ಸೇವಾ ಚಟುವಟಿಕೆಯ ಕಾರ್ಯಕ್ರಮದ,ಮುಖೇನ ಶಾಲೆಯ ಪ್ರತಿ ಕೊಠಡಿಗೆ ಗೋಡೆ ಗಡಿಯಾರವನ್ನು ಕಾರ್ಯಕ್ರಮದ ಸಂಯೋಜಕರು, ಪ್ರಾಯೋಜಕರಾದ ಲlತುಕಾರಾಂ ಏನೇಕಲ್ಲುರವರು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬುಲ್ ಬೆಟ್ಟು ವಹಿಸಿದ್ದರು, ವೇದಿಕೆಯಲ್ಲಿ ಸನ್ಮಾನವನ್ನ ನೆರವೇರಿಸಿದ ಲl ಮಾದವ ಗೌಡ ಜಾಕೆ, ಸನ್ಮಾನಿತರು ಶ್ರೀಮತಿ ಗಾಯತ್ರಿ ನಿವೃತ್ತ ಮುಖ್ಯ ಶಿಕ್ಷಕರು, ಕಾರ್ಯಕ್ರಮದ ಸಂಯೋಜಕರಾದ,ಲl ತುಕಾರಾಂ ಏನೆಕಲ್ಲು, ಶಾಲೆಯ ಮುಖ್ಯ ಶಿಕ್ಷಕರು ರಮೇಶ್ ಉಪಸ್ಥಿತರಿದ್ದರು.
ಲl ಸೀತಾರಾಮ ಕುದ್ವರವರು ವೇದಿಕೆಗೆ ಆಹ್ವಾನಿಸಿದರು, ಲlಶಶಿಧರ ಪಳಂಗಾಯ ಸ್ವಾಗತಿಸಿ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ವಂದಿಸಿದರು.