- Thursday
- November 21st, 2024
ಕುಕ್ಕೆ ಶ್ರೀ ಸುಬ್ರ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದ ಹಿಂದಿ ವಿಭಾಗದ ವತಿಯಿಂದ “ಹಿಂದಿ” ಸಂಘದ ಉದ್ಘಾಟನಾ ಸಮಾರಂಭ ಸೆ.8 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಕೆ ವಹಿಸಿದ್ದು ಉದ್ಘಾಟನೆಯನ್ನು ಪ್ರೊ. ರಾಮಕೃಷ್ಣ ಕೆ. ಎಸ್. ವಿಭಾಗಾಧ್ಯಾಕ್ಷರು, ಹಿಂದಿ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಇವರು ನೆರವೇರಿಸಿ ಬಳಿಕ ಹಿಂದಿ...
ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಯವರ ಮಾತೃಶ್ರೀ ಮನೋರಮ ಭೀಮಗುಳಿಯವರಿಗೆ ನುಡಿನಮನ ಹಾಗೂ ವೈಕುಂಟ ಸಮಾರಾಧನೆ ಕಾರ್ಯಕ್ರಮ ಸೆ. 7 ರಂದು ಹರಿಹರಪಲ್ಲತ್ತಡ್ಕದ ಭೀಮಗುಳಿಯಲ್ಲಿ ನೆರವೇರಿತು. ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ಭರತ್ ಮುಂಡೋಡಿ ನುಡಿ ನಮನ ಸಲ್ಲಿಸಿ ಅವರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ....
ಗಾಂಧಿನಗರ ಮಸೀದಿ ಮುಂಭಾಗದಿಂದ ನಾವೂರು ಜಟ್ಟಿಪಳ್ಳಕ್ಕೆ ಹೊಗುವ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಲು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಸಚಿವರಾದ ಝಮೀರ್ ಅಹಮದ್ ಖಾನ್ ಅವರಲ್ಲಿ ಮನವಿ ಮಾಡಲಾಯಿತು
ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...
ಸುಳ್ಯ ಗಾಂಧಿನಗರ ಮಸೀದಿ ಮುಂಭಾಗದಿಂದ ನಾವೂರು ಜಟ್ಟಿಪಳ್ಳಕ್ಕೆ ಹಾದು ಹೊಗುವ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖಾ ಸಚಿವರಾದ ಝಮೀರ್ ಅಹಮದ್ ಖಾನ್ ಅವರಿಗೆ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಗೆಳೆಯರ ಬಳಗ(ರಿ.) ದೇವ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲ(ರಿ.) ದೇವ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ, ಅಂಗನವಾಡಿ ಬೆಂಬಲ ಸಮಿತಿ ದೇವ-ದೇವಚಳ್ಳ ಇವುಗಳ ಜಂಟಿ ಆಶ್ರಯದಲ್ಲಿ ಸೆ.06 ರಂದು ದ.ಕ.ಜಿ.ಪಂ.ಸ.ಕಿ.ಪ್ರಾ ಶಾಲಾ ವಠಾರ ದೇವ ಇಲ್ಲಿ 33ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಜಾರುಕಂಬ ಸೇರಿದಂತೆ ಇನ್ನಿತರ ಸ್ಪರ್ಧಾ ಕಾರ್ಯಕ್ರಮಗಳು...
ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಸೆ. 07 ರಂದು ಸರಕಾರಿ ಪ್ರೌಢಶಾಲೆ ಏನೆಕಲ್ಲಿನಲ್ಲಿ ಶಿಕ್ಷಕರ ದಿನಾಚರಣೆ, ಸನ್ಮಾನ ಹಾಗೂ ಸೇವಾ ಕಾರ್ಯಕ್ರಮ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು, ಸನ್ಮಾನವನ್ನು ಲl ಮಾದವ ಗೌಡ ಜಾಕೆ ,ಹಾಗೂ ಲlಲೀಲಾ ಮಾದವ ಗೌಡ ಜಾಕೆ ಇವರು ನೆರವೇರಿಸಿದರು. ಏನಕಲ್ಲಿನ ಸರ್ಕಾರಿ ಪ್ರೌಢಶಾಲೆ...
ಮಡಪ್ಪಾಡಿ ಗ್ರಾಮದ ಗುಡ್ಡೆಮನೆ ಚಂದ್ರಶೇಖರ ಗೌಡ ರವರು ಸೆ.7 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಇವರಿಗೆ 65 ವರ್ಷ ವಯಸ್ಸಾಗಿತ್ತು.ಕಂದ್ರಪ್ಪಾಡಿ ರಾಜ್ಯದೈವ ಪುರುಷದೈವ ದೇವಸ್ಥಾನ ಸೇರಿದಂತೆ ಮಡಪ್ಪಾಡಿ,ದೇವಚಳ್ಳ ಗ್ರಾಮದ ಇರ್ವೆರ್ ಉಳ್ಳಾಕುಲು ದೈವಗಳ ಪರಿಚಾರಕರಾಗಿ ದೈವಾರಾಧನೆಯ ಕೊಂಡಿಯಾಗಿ ಸೇವೆ ಸಲ್ಲಿಸಿದ್ದರು.ಇವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮಡಪ್ಪಾಡಿ ಇದರ ನಿರ್ದೇಶಕಿ ತಾರಾ.ಜಿ.ಸಿ,...