Ad Widget

ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು. ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿ ಕೋಡಿ, ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಕಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್ ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ ಬಾಂಜಿಕೋಡಿ ಹಾಗೂ ತಂಡದ ಸದಸ್ಯರಾಗಿ ಶ್ರೀಧರ ಕಂಡಿಗೆಮೂಲೆ, ಶಿವರಾಮ ಆಚಾರ್ಯ ಖಂಡಿಗೆಮೂಲೆ, ವಿಜಿತ್ ಪಿ ಗುಡ್ಡೆಮನೆ, ಲವಕುಮಾರ್ ಜಿ ಗುಡ್ಡೆಮನೆ, ದಿನೇಶ್ ಆಚಾರ್ಯ ನಾಟಿಕೇರಿ ಯವರನ್ನು ಆಯ್ಕೆ ಮಾಡಲಾಯಿತು. ಈ ತಂಡದ ಪ್ರಥಮ ಭಜನಾ ಸೇವೆಯನ್ನು ಶ್ರೀ ಕ್ಷೇತ್ರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಇಲ್ಲಿನ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಇವರ ಪ್ರಾರ್ಥನೆಯ ಮೂಲಕ ಭಜನಾ ಸೇವೆಯನ್ನು ಶ್ರೀ ಕ್ಷೇತ್ರದಲ್ಲಿ ನಡೆಸಿಕೊಟ್ಟರು. ಎರಡನೆಯ ಭಜನಾ ಸೇವೆಯನ್ನು ತಂಡದ ಕಾರ್ಯದರ್ಶಿಯಾದ ವೆಂಕಟರಮಣ ಕಂಡಿಗೆಮೂಲೆ ಇವರ ಮನೆಯಲ್ಲಿ ನಡೆಸಲಾಯಿತು. ಮೂರನೇ ಭಜನೆ ಸೇವೆಯನ್ನು ತಂಡದ ಅಧ್ಯಕ್ಷರಾಗಿರುವ ಚಿದಾನಂದ ಬಾಂಜಿಕೋಡಿ ಇವರ ಮನೆಯಲ್ಲಿ ನಡೆಸುವುದು ಎಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ತಂಡದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading