Ad Widget

ಮಡಪ್ಪಾಡಿಯಲ್ಲಿ ಎಂ.ವಿ.ವಂದಿತ್ ಮಾಲಕತ್ವದ ಮಡಪ್ಪಾಡಿ ಆಯಿಲ್‌ ಮಿಲ್ ಶುಭಾರಂಭ

ಮಡಪ್ಪಾಡಿಯ ಎಂ.ಡಿ. ವಿಜಯಕುಮಾರ್ ರವರ ಪುತ್ರ ಎಂ.ಡಿ.‌ವಂದಿತ್ ರವ‌ರ ಮಾಲಕತ್ವದ ಮಡಪ್ಪಾಡಿ‌ ಆಯಿಲ್ ಮಿಲ್ ಇಂದು ಶುಭಾರಂಭ ಗೊಂಡಿತು.ಎಂ.ಡಿ.ವಿಜಯಕುಮಾರ್ ರವರ ಮಾತೃಶ್ರೀ ಎಂ.ಡಿ.ಬಾಲಕಿಯವರು ಕಿರು ಉದ್ಯಮವನ್ನು‌ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಸಹಕಾರಿ ಧುರೀಣರಾದ ನಿತ್ಯಾನಂದ ಮುಂಡೋಡಿ, ದ.ಕ.ಜಿ.ಪಂ. ಮಾಜಿ ಸದಸ್ಯರಾದ ಭರತ್ ಮುಂಡೋಡಿ, ಮಡಪ್ಪಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ, ಟಿ.ಎ.ಪಿ.ಸಿ.ಎಂ.ಎಸ್. ಮಾಜಿ ನಿರ್ದೇಶಕ ಹಾಗೂ ಮಡಪ್ಪಾಡಿ ಗ್ರಾ.ಪಂ. ಹಾಲಿ‌ ಸದಸ್ಯ ಹೆಚ್.ಬಿ.ಜಯರಾಮ ಹಾಡಿಕಲ್ಲು ಉಪಸ್ಥಿತರಿದ್ದರು.ವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಯ್ಯ ಪೂಂಬಾಡಿ ಮೊದಲ ಗ್ರಾಹಕರಾದರು. ಎಂ.ಡಿ. ವಿಜಯಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮಾಲಕ ಎಂ.ವಿ.ವಂದಿತ್ ವಂದಿಸಿದರು. ಸಭೆಯಲ್ಲಿ ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಜಯರಾಮ ಪಿ.ಸಿ., ವೈದ್ಯರಾದ ಡಾ. ನಂದಕುಮಾರ್, ರೈತ ಉತ್ಪಾದಕ‌ ಸಂಸ್ಥೆಯ ನಿರ್ದೇಶಕ ಜಯರಾಮ‌ ಮುಂಡೋಳಿಮೂಲೆ, ಪ್ರಮುಖರಾದ ಕಿಶೋರ್ ಕುಮಾರ್ ಕೂಜುಗೋಡು, ಪಿ.ಎಸ್. ಗಂಗಾಧರ್, ದಿನೇಶ್ ಮಡಪ್ಪಾಡಿ, ಮಡಪ್ಪಾಡಿ ಗ್ರಾ.ಪಂ.ಸದಸ್ಯ ಮಿತ್ರದೇವ ಮಡಪ್ಪಾಡಿ, ಇಂಜಿನಿಯರ್ ಜನಾರ್ಧನ ಕುತ್ಯಾಳ, ಮಡಪ್ಪಾಡಿ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ, ನಿರ್ದೇಶಕರಾದ ಸೋಮಶೇಖರ ಕೇವಳ, ಅಜಯ್ ವಾಲ್ತಾಜೆ ಹಾಗೂ ಎಂ.ಡಿ. ನಿರಂಜನ ಎಂ.ವಿ.ವಿಜೇತ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading