ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಜರುಗುತ್ತಿರುವ ಕೃಷ್ಣ ಜನ್ಮಾಷ್ಟಾಮಿಯು ವಿವಿಧ ಅಟೋಟ ಸ್ಪರ್ಧೆಗಳ ಮೂಲಕ ಜರುಗುತ್ತಿದ್ದು ಇದೀಗ ಮಹಿಳಾ ಮತ್ತು ಪುರುಷರ ಪಂದ್ಯಾಟಗಳು ಬೇರೆ ಬೇರೆ ಅಂಕಣಗಳಲ್ಲಿ ನಡೆಯುತ್ತಿದ್ದು ಮಹಿಳೆಯರ ತೋಬಾಲ್ ಪಂದ್ಯಾಟದಲ್ಲಿ ನಾಗಶ್ರೀ ಪ್ರೇಂಡ್ಸ್ ಪ್ರಥಮ ಮತ್ತು ಜಿ ಎಪ್ ಜಿ ಸಿ ದ್ವಿತೀಯ ಬಹುಮಾನವನಗನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ , ಸುಭೋದ್ ಶೆಟ್ಟಿ ಮೇನಾಲ , ಶೀನಪ್ಪ ಬಯಂಬು , ಪ್ರಬೋದ್ ಶೆಟ್ಟಿ ಮೇನಾಲ , ಸುನಿಲ್ ರೈ ಮೇನಾಲ , ಸತ್ಯವತಿ ಬಸವನಪಾದೆ , ಅಕ್ಷಯ್ ಮೇನಾಲ , ಕಮಲಾಕ್ಷ ರೈ ಬಾಡೇಲು , ಚನಿಯ ಕಲ್ತಡ್ಕ , ಬಾಲಕೃಷ್ಣ ಮೇನಾಲ , ಮಹೇಶ್ ರೈ ಮೇನಾಲ ಸೇರಿದಂತೆ ನೂರಾರು ಜನತೆ ಭಾಗವಹಿಸಿದ್ದರು. ಇದೀಗ ಕಾರ್ಯಕ್ರಮ ಮುಂದುವರೆದಿದ್ದು ಸ್ಥಳಕ್ಕೆ ಮಂಗಳೂರು ಅಡಿಷ್ನಲ್ ಎಸ್ ಪಿ ಧರ್ಮಪ್ಪ ಎಂ.ಎನ್ ಸ್ಥಳಕ್ಕೆ ಭೇಟಿ ನೀಡಿದ್ದು ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ. ಸುತ್ತಲು ಪೋಲಿಸ್ ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
- Thursday
- November 21st, 2024