
ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಕ್ಕೆ ಹೋಲಿಸಿ, ಅದನ್ನು ನಾಶ ಮಾಡುವಂತೆ ಬಹಿರಂಗ ಬೆದರಿಕೆ ಹಾಕಿದ ತಮಿಳುನಾಡು ಮುಖ್ಯಮಂತ್ರಿಯ ಮಗ ಮತ್ತು ಸಚಿವರಾದ ಉದಯ ನಿಧಿ ಸ್ಟಾಲಿನ್ ವಿರುದ್ಧ ಸುಳ್ಯ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕರಾದ ಮಹೇಶ್ ಉಗ್ರಾಣಿಮನೆ ಪ್ರಕರಣ ದಾಖಲಿಸಿದರು, ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಹ ಸಂಯೋಜಕ್ ಶರತ್ ಅಡ್ಯಡ್ಕ, ಹಿಂದು ಯುವ ವಾಹಿನಿ ಸಂಯೋಜಕ್ ಅಭಿಷೇಕ್ ತೊಡಿಕಾನ , ಹಾಗೂ ತಾಲೂಕು ಪಮುಖರಾದ ಕೌಶಲ್, ವಿಜೇತ್ ಅಡ್ಯಡ್ಕ, ಕೀರ್ತನ್ ಪೆರುಮುಂಡ, ಸತೀಶ್ ಕಟೂರು, ಕೆ.ಪಿ.ಶೆಟ್ಟಿ, ಉಪಸ್ಥಿತರಿದ್ದರು.