
ರಕ್ತದಾನ ಮಾಡುವ ಮೂಲಕ ಶೈಲೇಶ್ ಅಂಬೆಕಲ್ಲು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಸ್ನೇಹಿತ ಬಳಗದವರೊಂದಿಗೆ ಸೇರಿ 102 ನೇ ಬಾರಿಗೆ ಕೆ ವಿ ಜಿ ಮೆಡಿಕಲ್ ಕಾಲೇಜಿನಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟುಹಬ್ಬದ ಆಚರಣೆಯನ್ನು ಮಾಡುವುದರೊಂದಿಗೆ ಸಾಮಾಜಿಕ ಕಾಳಜಿ ಮೆರೆದಿರುತ್ತಾರೆ. ಶೈಲೇಶ್ ಅಂಬೆಕಲ್ಲು ಅವರ ಜತೆಗೆ ರಾಜೇಶ್ ಅಂಬೆಕಲ್ಲು, ಉದಯ ಕೊಪ್ಪಡ್ಕ, ಪ್ರಶಾಂತ್ ಮೆದು, ಲೋಹಿತ್ ಮಾವಿನಗೊಡ್ಲು, ವಿಜಯಕಾಂತ್ ಮಾವಿನಕಟ್ಟೆ, ಪ್ರವೀಣ್ ಮಾವಿನಕಟ್ಟೆ, ದಿನೇಶ್ ಮಾವಿನಕಟ್ಟೆ, ಅಖಿಲ್ ಮಾವಿನಕಟ್ಟೆ, ಯಶ್ವಿತ್ ಸೇವಾಜೆ ರಕ್ತದಾನ ಮಾಡಿದರು.
