ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಆಶ್ರಯದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ರಬ್ಬರ್ ನೆಲಹಾಸು ವಿತರಣೆ, ಉಚಿತ ರೇಬಿಸ್ ಲಸಿಕೆ, ಮತ್ತು ಪಶು ಸಕೀಯರಿಗೆ ಬ್ಯಾಗ್ ಕಿಟ್ಟ್ ಗಳ ವಿತರಣೆ ಪಶು ಆಸ್ಪತ್ರೆ ಸುಳ್ಯದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾಗೀರಥಿ ಮುರುಳ್ಯ ದೀಪ ಬೆಳಗುವುದರ ಮೂಲಕ ಉದ್ಘಾಟಸಿದರು. .ಪಶು ವೈಧ್ಯಾಧಿಕಾರಿಗಳಾದ ನಿತಿನ್ ಪ್ರಬು ಪ್ರಾಸ್ತವಿಕ ಮತಾನಾಡಿ ಸಿಬ್ಬಂದಿ ಕೊರತೆಯ ಬಗ್ಗೆ ತಮ್ಮ ಪ್ರಾಸ್ತವಿಕ ಮಾತುಗಳಲ್ಲಿ ಹೇಳಿದರು. ರಾಜ್ಯದಲ್ಲಿ ಇದೀಗ ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಏಕೈಕ ಮಲ್ಟಿ ಆಸ್ಪತ್ರೆಯಾಗಿ ಸುಳ್ಯ ಪಶು ಆಸ್ಪತ್ರೆ ಬೆಳೆದಿದೆ ಎಂದು ಹೇಳಿದರು. ಸುಳ್ಯದಲ್ಲಿ ಜಿಲ್ಲಾ ಮಟ್ಟದ ಗೋಶಾಲೆ ಮತ್ತು ತಾಲೂಕು ಮಟ್ಟದ ಗೋಶಾಲೆ ಸುಳ್ಯದ ಕೊಡಿಯಾಳಬೈಲಿನಲ್ಲಿ ಸದ್ಯದಲ್ಲೆ ಪ್ರಾರಂಭವಾಗಲಿದೆ , ಅದರ ನಿರ್ವಾಹಣೆಗೆ ಖಾಸಗಿ ಸಂಘ ಸಂಸ್ಥೆಗಳು ಹಾಗೂ ಮುಜರಾಯಿ ಇಲಾಖೆಗಳ ದೇವಾಲಯಗಳನ್ನು ಸಂಪರ್ಕಿಸುತ್ತಿರುವುದಾಗಿ ತಿಳಿಸಿದರು. ಹೈನುಗಾರಿಕೆ ನಡೆಸುವ ರೈತರು ತಮ್ಮ ದನಗಳಿಗೆ ತೀರ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ 1962 ಪಶು ಸಂಜೀವಿನಿ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಈ ಆ್ಯಂಬುಲೆನ್ಸ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಅವರು ಹೇಳಿದರು. ಉದ್ಘಾಟಕರ ಮಾತುಗಳನ್ನಾಡಿದ ಶಾಸಕಿ ಗೋ ಶಾಲೆಯ ಅಭಿವೃದ್ದಿ ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿ ಆಗಬೇಕು, ಸಾಕು ಪ್ರಾಣಿಗಳ ನೋವಿಗೆ ಪಶವೈದ್ಯಾಧಿಕಾರಿಗಳು ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಬೇಕು ಅಲ್ಲದೇ ಪ್ರತಿಯೊಬ್ಬರು ಪ್ರಾಣಿ ಪ್ರಿಯರಾಗಬೇಕು ಎಂದು ಹೇಳಿದರು.
ಸಭೆಯ ಬಳಿಕ ಆಸ್ಪತ್ರೆಯ ಮೂಲಭೂತ ಸೌಕರ್ಯ ಮತ್ತು ಆಂಬುಲೆನ್ಸ್ ಸೌಕರ್ಯಗಳನ್ನು ವೀಕ್ಷಿಸಿದರು.ವೇದಿಕೆಯಲ್ಲಿ ಡಾ. ನಿತಿನ್ ಪ್ರಭು, ಡಾ. ನಾಗರಾಜ್, ಡಾ. ಸೂರ್ಯ ನಾರಾಯಣ ಬಿ.ಕೆ , ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷಪ್ಪರಾಜ್ ಶೆಟ್ಟಿ, ಡಾ. ವೆಂಕಟಾಚಲಪತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಶು ಸಖಿಯರು , ಫಲಾನುಭವಿಗಳು, ಪಶು ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.