
ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಸೆ. 01ರಂದು ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸುಜಯಕುಮಾರಿ ಬಿ ಡಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಆನಂದ ಬಾಣೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ವೀಣಾ ಎಂ ಟಿ, ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ್ ಕೆ,ಗೋವಿಂದ ಕೆ,ಕಾರ್ಯಪ್ಪ ಕಂಜಿಪಿಲಿ, ಲಕ್ಷ್ಮಿ, ಅನಿತಾ ಹಾಗೂ ವಿದ್ಯಾರ್ಥಿ ನಾಯಕ ದರ್ಶನ್ ಬಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಶ್ರೀಮತಿ ಸುಜಯಕುಮಾರಿ ಬಿ ಡಿ ಇವರನ್ನು ಅವರ ಮಾತೃಶ್ರೀಯವರೊಂದಿಗೆ ಹಣ್ಣು,ಹಂಪಲು,ಸ್ಮರಣಿಕೆ ಹಾಗೂ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಗಣೇಶ್ ಎಂ. ಟಿ ಇವರನ್ನು ಸಂಸ್ಥೆಯ ಪರವಾಗಿ ಸ್ವಾಗತಿಸಲಾಯಿತು.ಊರಿನ ಹಿರಿಯರಾದ ರಾಮಣ್ಣ ಗೌಡ ಬುಡಾಳೆ ಇವರು ಶಾಲು ಹೊದಿಸಿ,ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ವೀಣಾ ಎಂ. ಟಿ ಸ್ವಾಗತಿಸಿ,ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಣೇಶ್ ಎಂ. ಟಿ. ವಂದಿಸಿದರು. ಶಿಕ್ಷಕಿ ರುಕ್ಮಿಣಿ ಕೆ ಸನ್ಮಾನ ಪತ್ರ ವಾಚಿಸಿದರು. ವಿಜಯಲಕ್ಷ್ಮಿ ಎಂ ಕಾರ್ಯಕ್ರಮ ನಿರೂಪಿಸಿದರು.


