ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾರ್ಮಿಕರ ಮೇಲೆ ಹರಿದ ಪರಿಣಾಮ ಓರ್ವ ಮೃತ ಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಅಡ್ಕಾರ್ ಬಳಿ ಸಂಭವಿಸಿದೆ.
ಹುಣಸೂರಿನಿಂದ ಮೂಡಬಿದ್ರೆಗೆ ಮೂರ್ತಿ ಎಂಬುವವರು ತನ್ನ ಊರಿನಿಂದ ಮುಂಜಾನೆ 3 ಗಂಟೆ ಸುಮಾರಿಗೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದು ತಾವು ಚಲಾಯಿಸುತ್ತಿದ್ದ ಕಾರು ಅಡ್ಕಾರಿನಲ್ಲಿ ಹಾವೇರಿ ಮೂಲದ ಕಾರ್ಮಿಕರ ಗುಂಪಿನೆಡೆಗೆ ನುಗ್ಗಿದೆ. ಅಡ್ಕಾರ್ ಕರಾವಳಿ ಹೊಟೇಲ್ ಬಳಿ ಕೆಲಸ ಅರಸಿ ಅ ೩೦ರ ರಾತ್ರಿ ಆಗಮಿಸಿದ್ದ ಈ ತಂಡವು ಕೆಸಕ್ಕೆ ತೆರಳಲು ಮುಂಜಾನೆ ಸುಮಾರು ೬:೪೫ರ ಸುಮಾರಿ ರಸ್ತೆ ಬದಿ ನಿಂತಿದ್ದಾಗ ಕಾರು ಡಿಕ್ಕಿ ಹೊಡೆದಿದೆ, ಬಳಿಕ ಕಾರು ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕೂಡ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓರ್ವ ಸ್ಥಳದಲ್ಲೆ ಮೃತಪಟ್ಟರೆ ಇನ್ನೋರ್ವ ಸುಳ್ಯ ಹಾಗೂ ಮತ್ತೋರ್ವ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು .
ಮೃತಪಟ್ಟ ಕಾರ್ಮಿಕರನ್ನು ಚೆನ್ನಪ್ಪ ತಂದೆ ಹೀರಪ್ಪ ಲಮಾಣಿ ರಾಣೆಬೆನ್ನೂರು ಕಾಕೋಲ ತಾಂಡವ , ರೇಖಪ್ಪ ತಂದೆ ಶೇಖಪ್ಪ ಲಮಾಣಿ ರಾಣೆಬೆನ್ನೂರು ಕಾಕೋಲ ತಾಂಡವ , ಮಹಂತೇಶ್ ತಂದೆ ಗಂಗಪ್ಪ ರಾಣೆಬೆನ್ನೂರು ಕಾಕೋಲ ತಾಂಡವ ಎಂದು ತಿಳಿದುಬಂದಿದೆ. ಈ ಕಾರ್ಮಿಕರ ತಂಡವು ಜಾಲ್ಸೂರು ಗ್ರಾಮದಲ್ಲಿ ಕೇಂದ್ರ ಸರಕಾರದ ಜೆಜೆಎಂ ಟ್ಯಾಂಕ್ ನಿರ್ಮಾಣ ಕಾಮಗಾರಿ ನಿರ್ವಹಿಸಲು ಆಗಮಿಸಿದ್ದರು. ಇವರ ತಂಡದಲ್ಲಿ ಒಟ್ಟು ಹನ್ನೊಂದು ಮಂದಿ ಆಗಮಿಸಿದ್ದು ಈ ಪೈಕಿ ಮೂವರು ಮೃತಪಟ್ಟಿದ್ದು ಓರ್ವ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರ ಕೈ ಹಾಗೂ ತಲೆಗೆ ಗಂಬೀರ ತರನದ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತ್ಯಕ್ಷ ದರ್ಶಿ ಮಾಹಿತಿಯ ಪ್ರಕಾರ ಮುಂಜಾನೆ ಸುಮಾರು ೬:೪೫ ರ ವೇಳೆಗೆ ಈ ಘಟನೆ ನಡೆದಿದ್ದು ಚಾಲಕನು ರಾಗ್ ಸೈಡ್ ನಲ್ಲಿ ಬಂದು ಗುದ್ದಿದ್ದು ಗುದ್ದಿದ ರಭಸಕ್ಕೆ ಓರ್ವ ಪಕ್ಕದಲ್ಲಿ ನಿಂತಿದ್ದ ಲಾರಿಯ ಮುಂಬಾಗಕ್ಕೆ ಬಿದ್ದರು ಹಾಗೂ ಈ ಸಂದರ್ಭದಲ್ಲಿ ಚೀರುತ್ತಾ ಅರಚುತ್ತಾ ಓಡಿ ಬಂದರು ಯಾವುದೇ ಪ್ರಯೋಜನವಾಗಿಲ್ಲಾ . ನಾವು ೧೧ ಮಂದಿಯ ತಂಡವು ಅ ೩೦ರ ರಾತ್ರಿ ಕೂಲಿ ಕೆಲಸಕ್ಕಾಗಿ ಬಂದಿದ್ದು ನಮ್ಮ ನಾಡಲ್ಲಿ ಬರದ ಪರಿಸ್ಥಿತಿ ಇದ್ದು ಇದೀಗ ನಮ್ಮ ಜೊತೆಗೆ ಬಂದವರು ಇಲ್ಲವಾಗಿದ್ದಾರೆ ಎಂದು ಹುಲಿಯಪ್ಪ ತಿಳಿಸಿದ್ದಾರೆ. ಇತ್ತ ಮೃತಪಟ್ಟರ ಕುಟುಂಬಸ್ಥರು ಸುಳ್ಯಕ್ಕೆ ಆಗಮಿಸಿ ಮೃತದೇಹವನ್ನು ಊರಿಗೆ ಕೊಂಡೋಯ್ಯಲಿದ್ದಾರೆ ಎಂದು ತಿಳಿದುಬಂದಿದೆ.