Ad Widget

ಬಿಳಿನೆಲೆ: ವಿಶ್ವ ಯೋಗ ದಿನಾಚರಣೆ

ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ರಿಜಿಸ್ಟರ್ ಸುಬ್ರಮಣ್ಯ ಇದರ ಅಂಗಸಂಸ್ಥೆಯಾದ ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಇಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 21/06/2023 ಬುಧವಾರದಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಶರ್ಮ ಕಾರ್ಯದರ್ಶಿಗಳು, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ (ರಿ) ಇವರು ಮಾತನಾಡಿ ಯೋಗವು ಮಾನವನ ಸರ್ವಾಂಗಿನ ಬೆಳವಣಿಗೆಗೆ ಹಾಗೂ ಆರೋಗ್ಯಕರ ಜೀವನವನ್ನು ನೀಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಯೋಗದ ಪ್ರಾಕಾರಗಳನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸುಬ್ರಮಣ್ಯ ಅದರ ಸದಸ್ಯರಾದ ಗಾಯತ್ರಿ ವೆಂಕಟೇಶ್ ನಾಗರಾಜ ಸುಬ್ರಮಣ್ಯ ಇವರು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಭಾಕರ ಪಡ್ರೆ, ವಿಶ್ವನಾಥನ ತೋಟ, ನಾಗರಾಜ ಸುಬ್ರಮಣ್ಯ, ಕುಮಾರಣ್ಣ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗುರುಪ್ರಸಾದ್ ಭಟ್ ಶಿಕ್ಷಕರು ನಿರೂಪಿಸಿದರು. ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಶಾಂತ್ ಇವರು ವಂದಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!