ಶ್ರೀ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 8ನೇ ತರಗತಿಯ ಪ್ರಣಿತ್ ಎಂ ಆರ್ ಉಪನಾಯಕನಾಗಿ 7ನೇ ತರಗತಿಯ ಸೃಜನ್ ರನ್ನು ಆಯ್ಕೆ ಮಾಡಲಾಯಿತು. ಶಿಕ್ಷಣ ಮಂತ್ರಿಯಾಗಿ ನಿಷ್ಮಾ 8ನೇ ತರಗತಿ, ಉಪ ಶಿಕ್ಷಣ ಮಂತ್ರಿಯಾಗಿ ಅನ್ವಿತ 7ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ದಿಶಾ 7ನೇ ತರಗತಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಪ್ರಾಪ್ತಿ 6ನೇ ತರಗತಿ, ಕ್ರೀಡಾ ಹಾಗೂ ಶಿಸ್ತು ಪಾಲನಾ ಮಂತ್ರಿಯಾಗಿ ಕೌಶಿಕ್ 8ನೇ ತರಗತಿ ಮತ್ತು ಪ್ರೇಕ್ಷ 7ನೇ ತರಗತಿ, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಯಾಗಿ ಶೋಭಿತ್ 7ನೇ ತರಗತಿ, ಆಹಾರ ಮತ್ತು ನೀರಾವರಿ ಮಂತ್ರಿಯಾಗಿ ಪ್ರಖ್ಯಾತ್ 8ನೇ ತರಗತಿ, ಹಂಶಿನಿ 7ನೇ ತರಗತಿ, ಗೃಹಮಂತ್ರಿಯಾಗಿ ಲೋಹಿತ್ 8ನೇ ತರಗತಿ, ಉಪಗೃಹಮಂತ್ರಿಯಾಗಿ ವಿನ್ಯಾಸ 7ನೇ ತರಗತಿ ಹಾಗೂ ವಿರೋಧಪಕ್ಷದ ನಾಯಕರಾಗಿ ತೇಜಸ್ ಹಾಗೂ ಸಿಂಚನ್ ಎಂಟನೇ ತರಗತಿ ಆಯ್ಕೆಯಾದರು. ಮತದಾನ ಅಧಿಕಾರಿಗಳಾಗಿ ಶ್ರೀ ಗುರುಪ್ರಸಾದ್ ಹಾಗೂ ಶ್ರೀ ಮಹಾಬಲೇಶ್ವರ ಕಾರ್ತಿಕ್ ಹಾಗೂ ಮುಖ್ಯ ಗುರುಗಳಾದ ಶ್ರೀ ಪ್ರಶಾಂತ್ ಮತ್ತು ಸಹ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.
- Saturday
- November 23rd, 2024