ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ನವದೆಹಲಿ ನಿಯೋಜಿಸಿರುವ WASH (Water, Sanitation and Hygiene) ತಜ್ಞರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಿರುವ ಪ್ರಗತಿ, ನೀರು ನೈರ್ಮಲ್ಯ ಸಮಿತಿಗಳ ರಚನೆ, ನೀರಿನ ಗುಣಮಟ್ಟ ಪರೀಕ್ಷೆ, ಸಮುದಾಯ ಭಾಗವಹಿಸುವಿಕೆ ಇತ್ಯಾದಿ ವಿಷಯಗಳು ಕುರಿತು ಪರಿಶೀಲನೆ ನಡೆಸಿದರು.
ಈಗಾಗಲೇ ಪುತ್ತೂರು, ಕಡಬ, ಬಂಟ್ವಾಳ ತಾಲೂಕಿನ ಆಯ್ದ ಗ್ರಾಮ ಪಂಚಾಯತುಗಳಿಗೆ ತಜ್ಞ ಅಧಿಕಾರಿಗಳಾದ ರಮೇಶ್ ಕುಮಾರ್ ಮತ್ತು ಕೃಷ್ಣ ಕಿಶೋರ್ ಅವರ ನೇತೃತ್ವದ ತಂಡವು ಜಿಲ್ಲೆಯ ಹಿರಿಯ ಕಿರಿಯ ಇಂಜಿನಿಯರುಗಳ ಜೊತೆ ಅಗತ್ಯ ಮಾಹಿತಿ ಪಡೆದು ಪರಿಶೀಲಿಸುತ್ತಿದ್ದಾರೆ. ಜೂ.16ರಂದು ಮಂಗಳೂರು ತಾಲೂಕಿನ ಐಕಳ ಮತ್ತು ಕುಪ್ಪೆಪದವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಲಿದ್ದಾರೆ.