ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡಪ್ಪಾಡಿ ಇಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಮುಖ್ಯೋಪಾಧ್ಯಾಯರಾಗಿ ಪದೋನ್ನತಿಗೊಂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಚಂದ್ರಶೇಖರ್ ಪಾರೆಪ್ಪಾಡಿ ಇವರ ಬೀಳ್ಕೊಡುಗೆ ಸಮಾರಂಭವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘ ಮಡಪ್ಪಾಡಿ ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.
ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮಾಧವ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿತ್ರದೇವ ಮಡ ಪ್ಪಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಡಪ್ಪಾಡಿ ಇದರ ಅಧ್ಯಕ್ಷರಾದ ಶ್ರೀ ಪಿ ಸಿ ಜಯರಾಮ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹೆಚ್. ಬಿ.ಜಯರಾಮ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಧರ್ಮಪಾಲ ತಳೂರು, ಗುತ್ತಿಗಾರು ಹಾಗೂ ದೇವಚಳ್ಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀ ಸಂತೋಷ್, ದಾನಿಗಳಾದ ಚಿನ್ನಮ್ಮ ಕಲ್ಲುಗದ್ದೆ, ಶ್ರೀ ಚಂದ್ರಶೇಖರ್ ಪಾರೆಪ್ಪಾಡಿರವರ ಧರ್ಮಪತ್ನಿ ಶ್ರೀಮತಿ ವೀಣಾ ಚಂದ್ರಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು. ಶಾಲಾ ಮುಖ್ಯ ಶಿಕ್ಷಕ, ಜಗದೀಶ್ ಎನ್ ಎಮ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಅಭ್ಯಾಗತರು ಸಂದರ್ಭೋಚಿತವಾಗಿ ಅಭಿಮಾನದ ಮಾತುಗಳನ್ನಾಡಿದರು. ಸನ್ಮಾನಿತ ಶಿಕ್ಷಕರನ್ನು ಶಾಲು, ಫಲ ಪುಷ್ಪ ತಾಂಬೂಲಗಳೊಂದಿಗೆ ಕಿರು ಕಾಣಿಕೆ ನೀಡಿ ಸನ್ಮಾನ ಮಾಡಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷರು, ಅಡುಗೆ ಸಿಬ್ಬಂದಿಗಳು, ಪ್ರೀತಿಯ ಪುಟಾಣಿಗಳು ಪ್ರತ್ಯೇಕವಾಗಿ ಸನ್ಮಾನಿಸಿದರು. ಸೇವಾ ನೆನಪಿಗಾಗಿ ಚಂದ್ರಶೇಖರ್ ಪಾರೆಪ್ಪಾಡಿ ರವರು ₹6,666/-ದತ್ತಿನಿಧಿ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಧ್ವನಿವರ್ಧಕವನ್ನು ದಾನ ನೀಡಿದ ಶ್ರೀಮತಿ ಚಿನ್ನಮ್ಮ ಕಲ್ಲುಗದ್ದೆ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾ ದಿನೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಶಿಕ್ಷಕಿಯರಾದ ಶ್ರೀಮತಿ ದಿವ್ಯ, ಶ್ರೀಮತಿ ಶಾಲಿನಿ ವಾಚಿಸಿದರು. ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಶಿಕ್ಷಕ ರಂಜಿತ್ ನಿರ್ವಹಿಸಿದರು. ಸಹಕರಿಸಿದ ಎಲ್ಲಾ ದಾನಿಗಳನ್ನು ಸ್ಮರಿಸಲಾಯಿತು.