Ad Widget

ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್. ವೆಂಕಟೇಶ್  ಮತದಾನ

 ಜೆಡಿಎಸ್ ಅಭ್ಯರ್ಥಿ ಹೆಚ್ ಎಲ್ ವೆಂಕಟೇಶ್ ರವರು ಜಟ್ಟಿಪಳ್ಳ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. 

ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಮತ ಚಲಾವಣೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ರಾಮಕುಂಜ ಮತಕೇಂದ್ರದಲ್ಲಿ ಮತಚಲಾಯಿಸಿದರು.
Ad Widget

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಮತ ಚಲಾವಣೆ

ಬಿಜೆಪಿ ಅಭ್ಯರ್ಥಿ ಭಾಗೀರಥಿ ಅವರು ಮುರುಳ್ಯ ದ ಶಾಂತಿನಗರ ಬೂತ್‌ನಲ್ಲಿ ಮತ ಚಲಾಯಿಸಿದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಮತ ಚಲಾವಣೆ

ಸುಳ್ಯ : ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಮತ ಚಲಾಯಿಸಿದರು. ತಂದೆ ಮಾಜಿ ಶಾಸಕ ಕೆ.ಕುಶಲ ಜತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಸಚಿವ ಅಂಗಾರರಿಂದ ಮತ ಚಲಾವಣೆ

ಸಚಿವ ಅಂಗಾರರವರು ದೊಡ್ಡತೋಟ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು. ತನಗೆ ತಾನೇ ಮತ ನೀಡುವ ಮೂಲಕ  ಆರು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅಂಗಾರರು ಈ ಸಲ ಬೇರೆಯವರಿಗೆ ಮತ ಚಲಾಯಿಸುತ್ತಿರುವುದು ಈ  ಚುನಾವಣೆಯ ವಿಶೇಷ.

♻️ದೇವ ಮತಗಟ್ಟೆಯಲ್ಲಿ ಕೈ ಕೊಟ್ಟ ಮತಯಂತ್ರ♻️

ದೇವ ಮತಗಟ್ಟೆಯಲ್ಲಿ ಕೈ ಕೊಟ್ಟ ಮತಯಂತ್ರ.ಈ ಬಾರಿ ಹೊಸದಾಗಿ ಆರಂಭಗೊಂಡ ದೇವಚಳ್ಳ ಗ್ರಾಮದ ದೇವ ಮತಗಟ್ಟೆಯಲ್ಲಿ ಮತದಾನ ಆರಂಭವಾಗಿ ಕೆಲ ಹೊತ್ತಿನಲ್ಲಿ ಮತಯಂತ್ರ ಕೈಕೊಟ್ಟ ಘಟನೆ ನಡೆದಿದೆ. ಬೇರೆ ಮತಯಂತ್ರ ತಂದ ಬಳಿಕ ಮತದಾನ ಪ್ರಕ್ರಿಯೆ ಪುನರಾರಂಭಗೊಂಡಿದ್ದು, 1 ಗಂಟೆ ವಿಳಂಬವಾದ ಕಾರಣ ಜನ ಕ್ಯೂ ನಿಲ್ಲುವ ಪರಿಸ್ಥಿತಿ ಉಂಟಾಯಿತು.

🩸ಸುಳ್ಯ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ🩸

ಸುಳ್ಯ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ.ಜೀವ ರಕ್ಷಿಸುವ ರಕ್ತದಾನ ಕ್ಕಿಂತ ಮಿಗಿಲಾದ ದಾನವಿಲ್ಲ, ಹಕ್ಕು ಮತ್ತು ಕರ್ತವ್ಯದ ಮತದಾನಕ್ಕಿಂತ ಮಿಗಿಲಾದ ಸೇವೆಯಿಲ್ಲ :ಪಿ. ಬಿ. ಸುಧಾಕರ್ ರೈ ಸುಳ್ಯ ರೆಡ್ ಕ್ರಾಸ್ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ವರ್ತಕರ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸುಳ್ಯ...

ಉಬರಡ್ಕ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವ

ಸುಳ್ಯ ಸೀಮೆಯ ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ಉಳ್ಳಾಕ್ಲು ನಾಯರ್ ದೈವಗಳ ಕಾಲಾವಧಿ ಜಾತ್ರೋತ್ಸವವು ಎ.26 ರಿಂದ ಮೇ .08 ರವರೆಗೆ ನಡೆಯಿತು.ಎ.26 ರಂದು ಬೆಳಿಗ್ಗೆ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.ಮೇ.02 ರಂದು ಸಂಜೆ ಮಿತ್ತೂರು ಮೂಲ ಸನ್ನಿಧಿಯಿಂದ ಉಳ್ಳಾಗಳ ಭಂಡಾರ ಬಂದು ವಾಲಸಿರಿಯಲ್ಲಿ ದೇವರಿಗೆ ಸ್ವಸ್ತಿಕೆ,ಬಲ್ಲಾಳರ ಕಾಣಿಕೆ,ಅಡ್ತಲೆ ಕಿರುಚಾವಡಿಗೆ ಭಂಡಾರ ಬಂದು ಉಳ್ಳಾಗಳ ದರ್ಶನ,ಪ್ರಸಾದ...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪಾಜೆಕ್ಟ್ ಎಕ್ಸ್‌ಪೋ- 2023

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ, ಎಕ್ಸ್‌ಪೋ-2023 ನಡೆಯಿತು. ಪ್ರದರ್ಶನದ ಉದ್ಘಾಟನೆಯನ್ನು ಕೆ.ವಿ.ಜಿ. ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶ್ರೀಧರ್ ಎಂ. ಕೆ. ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿಕೊಂಡರೆ ಹೊಸ ಅವಕಾಶಗಳು ದೊರೆಯುವುದರೊಂದಿಗೆ...

ಎಸ್ ಎಸ್ ಎಲ್ ಸಿ ಫಲಿತಾಂಶ : ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ. 100 ಫಲಿತಾಂಶ

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ. ಒಟ್ಟು 46 ವಿದ್ಯಾರ್ಥಿಗಳು ಪರೀಕ್ಷೆಗೆ .18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,28 ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
Loading posts...

All posts loaded

No more posts

error: Content is protected !!