- Saturday
- November 23rd, 2024
ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮವು ಮೇ.22ರಂದು ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆಯವರು ಉದ್ಘಾಟಿಸಿದರು. ಉಪಾಧ್ಯಕ್ಷೆ ಶ್ವೇತ ಹಾಗೂ ಪಂಚಾಯತ್ ಅಭಿವೃದ್ಧಿ ಆಧಿಕಾರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಹಾಗು ಕಚೇರಿ ಸಿಬ್ಬಂದಿಗಳು...
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಐವರ್ನಾಡು ಗ್ರಾಮದ ನಾಟಿಕೇರಿಯಲ್ಲಿ ನಿರ್ಮಿಸಿದ ನೂತನ ಬಸ್ ತಂಗುದಾಣವನ್ನು ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೊ. ಪ್ರಕಾಶ್ ಕಾರಂತ್ ಉದ್ಘಾಟಿಸಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಮೂರ್ತಿ ಮತ್ತು ಸದಸ್ಯರು, ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಉಪಾಧ್ಯಕ್ಷೆ...
ಸುಳ್ಯ ಕಸಬಾದ ಕಾಯರ್ತೋಡಿ ಸೂರ್ತಿಲ ವಿಷ್ಣುನಗರದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಶ್ರೀ ರಕ್ತೇಶ್ವರೀ ಕ್ಷೇತ್ರದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಬ್ರಹ್ಮಕಲಶೋತ್ಸವ ನಡೆದು ರಾತ್ರಿ ಶ್ರೀ ರಕ್ತೇಶ್ವರೀ ದೈವದ ನೇಮೋತ್ಸವ ಜರುಗಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸೇವಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ...
ಸುಳ್ಯ ಶಾಸಕಿಯಾಗಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ವಿಧಾನಸಭೆಯ ಮೊದಲ ವಿಶೇಷ ಅಧಿವೇಶನ ಮೇ.22ರಂದು ಆರಂಭಗೊಂಡಿದೆ. ಮೇ.22ರಂದು ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕುಲದೇವರಾದ ಸತ್ಯಸಾರಮಣಿ, ಸತ್ಯಪದನಾಜಿ, ಅಮ್ಮನವರು ಹಾಗೂ ಮಾತದಾರ ಭಾಂಧವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸೂರ್ತಿಲ ರಕ್ತೇಶ್ವರಿ ಕ್ಷೇತ್ರದ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸ್ವಾರ್ಥತೆಯಲ್ಲಿ ಪಾರಮಾರ್ಥತೆ ಇರಬೇಕು- ಆರ್. ಕೆ ನಾಯರ್
ಸ್ವಾರ್ಥತೆಯಲ್ಲಿ ಪರಮಾರ್ಥತೆ ಇರಬೇಕು. ಮನುಷ್ಯತ್ವ ಇದ್ದರೆ ಮಾತ್ರ ಆತ ಮನುಷ್ಯನಾಗುತ್ತಾನೆ. ಆಗ ಜಾತಿ, ಧರ್ಮ, ಕುಲ, ಬಣ್ಣಗಳ ಭೇದವಿಲ್ಲದೆ ನದಿ ನೀರುಣಿಸುವಂತೆ ದೇವರು ನಮ್ಮನ್ನು ಕಾಪಾಡುತ್ತಾನೆ. ಸನಾತನ ಹಿಂದೂ ಧರ್ಮ ಈ ನಾಡಿನ ಎಲ್ಲ ಧರ್ಮದವರನ್ನು ಕಾಪಾಡುತ್ತದೆ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್. ಕೆ ನಾಯರ್ ಹೇಳಿದರು. ಅವರು ಸೋಮವಾರ ಸುಳ್ಯದ...
ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆಯ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮೇ.20 ರಂದು ನಡೆಯಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ಕೆ ಬೆಳ್ಯಪ್ಪ ಗೌಡ ರವರು ಮಾತನಾಡುತ್ತಾ “ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬೆಳಿಗ್ಗೆ...
ಸುಳ್ಯ; ಬೈಕ್ ಅಪಘಾತ ಓರ್ವ ಮೃತ್ಯುಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯದ ಪಾಲಡ್ಕ ಎಂಬಲ್ಲಿ ಮೇ.22 ರಂದು ಸಂಭವಿಸಿದೆ.ಮೃತಪಟ್ಟಾತ ಕೆವಿಜಿ ಆಯುರ್ವೇದ ಕಾಲೇಜು ವಿಧ್ಯಾರ್ಥಿ ಸ್ವರೂಪ್(22) ಎಂದು ಗುರುತಿಸಲಾಗಿದೆ.ಈತ ಬೈಕ್ ನಲ್ಲಿ ತೆರಳುತ್ತಿದ್ದು ಓವರ್ ಟೇಕ್ ಮಾಡುವ ರಭಸದಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು...
ಸುಳ್ಯ: ಪಕ್ಷನಿಷ್ಠೆ, ಶ್ರದ್ಧೆ ಧಾರ್ಮಿಕ ನಂಬಿಕೆ ಹಾಗೂ ಎಲ್ಲರೊಡನೊಂದಾಗಿ ಬೆರೆತು ಬದುಕಿದ ನವೀನ್ ಕುಮಾರ್ ಮೇನಾಲ ಓರ್ವ ಅಜಾತಶತ್ರು. ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ ಎಂದು ಸುಳ್ಯದ ಬಿಜೆಪಿ ಮುಂದಾಳುಗಳು ಹೇಳಿದ್ದಾರೆ. ಮೆ.18ರಂದು ದುರಂತಕ್ಕೀಡಾಗಿ ನಿಧನರಾದ ಬಿಜೆಪಿ ಧುರೀಣ ನವೀನ್ ರೈ ಮೇನಾಲರಿಗೆ ಸೋಮವಾರ ಬಿಜೆಪಿ ಮಂಡಲ ಸಮಿತಿ ವತಿಯಿಂದ ಶ್ರದ್ಧಾಂಜಲಿ ಹಾಗೂ ಕಾರ್ಯಕ್ರಮದಲ್ಲಿ...
ಸುಳ್ಯ: ಸ್ವಾರ್ಥತೆಯಲ್ಲಿ ಪರಮಾರ್ಥತೆ ಇರಬೇಕು. ಮನುಷ್ಯತ್ವ ಇದ್ದರೆ ಮಾತ್ರ ಆತ ಮನುಷ್ಯನಾಗುತ್ತಾನೆ. ಆಗ ಜಾತಿ, ಧರ್ಮ, ಕುಲ, ಬಣ್ಣಗಳ ಭೇದವಿಲ್ಲದೆ ನದಿ ನೀರುಣಿಸುವಂತೆ ದೇವರು ನಮ್ಮನ್ನು ಕಾಪಾಡುತ್ತಾನೆ. ಸನಾತನ ಹಿಂದೂ ಧರ್ಮ ಈ ನಾಡಿನ ಎಲ್ಲ ಧರ್ಮದವರನ್ನು ಕಾಪಾಡುತ್ತದೆ ಎಂದು ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್. ಕೆ ನಾಯರ್ ಹೇಳಿದರು. ಅವರು ಸೋಮವಾರ...
ಕೊಲ್ಲಮೊಗ್ರದ ಹಾಲಿನ ಡೈರಿ ಹಾಗೂ ಪಶು ಆಸ್ಪತ್ರೆಯ ತಡೆಗೋಡೆಗೆ ಕಾಂಕ್ರೀಟ್ ಮಿಕ್ಸಿಂಗ್ ವಾಹನ ಗುದ್ದಿದ ಪರಿಣಾಮ ತಡೆಗೋಡೆ ಕುಸಿದ ಘಟನೆ ನಡೆದಿದೆ. ಈ ಹಿಂದೆ ರಸ್ತೆ ಕಾಮಗಾರಿ ನಡೆಸಲು ಬಂದ ಮಿಲನ್ ಸಂಸ್ಥೆ ಗೆ ಸೇರಿದ ಅಜೆಕ್ಸ್ ವಾಹನವು ತಡೆಗೋಡೆಗೆ ಗುದ್ದಿ ಎರಡು ಕಡೆ ಹಾನಿಗೊಳಿಸಿದ್ದರೆನ್ನಲಾಗಿದ್ದು, ಇದನ್ನು ಗ್ರಾಮಸ್ಥರು ಹಲವು ಸಲ ಪ್ರಶ್ನಿಸಿದ್ದರೂ ಯಾವುದೇ ರೀತಿಯ...
Loading posts...
All posts loaded
No more posts