ಸುಳ್ಯ ತಾಲೂಕಿನ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ ಕುಕ್ಕೇಟಿ ತರವಾಡಿನಲ್ಲಿ ನೂತನವಾಗಿ ನಿರ್ಮಿಸಲಾದ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ವಿಷ್ಣುಮೂರ್ತಿ, ಧರ್ಮದೈವ, ನಾಗದೇವರು, ಮುನಿಸ್ವಾಮಿ ಹಾಗೂ ಉಪದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಮೇ. 31 ಮತ್ತು ಜೂ.1ರಂದು ವಿವಿಧ ತಾಂತ್ರಿಕ ಹಾಗೂ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ವೇ. ಮೂ. ಕುಂಟಾರು ವಾಸುದೇವ ತಂತ್ರಿಗಳು ಹಾಗೂ ಬ್ರಹ್ಮಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಮೇ. 31ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವ ಮೂಲಕ ಆರಂಭಗೊಳ್ಳಲಿದೆ. ಅಪರಾಹ್ನ 4 ಗಂಟೆಗೆ ತಂತ್ರಿಗಳ ಆಗಮನದ ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹವಾಚನ, ಸುದರ್ಶನ ಹೋಮ, ಭೂವರಾಹ ಹೋಮ, ಪ್ರೇತಾವಾಹನೆ, ಬಾಧಾಮೂರ್ತಿಗಳ ಆವಾಹನೆ, ಉಚ್ಛಾಟನೆ, ಉಚ್ಛಾಟನೆ ಬಲಿ, ಸ್ಥಳ ಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಹಾಂತ ಕಾರ್ಯಕ್ರಮಗಳು ನಡೆಯಲಿವೆ.
ಜೂ.1ರಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಬೆಳಿಗ್ಗೆ 7.33ರಿಂದ 8.30ರ ಮಿಥುನ ಲಗ್ನದಲ್ಲಿ ತರವಾಡು ಮನೆಯ ಗೃಹಪ್ರವೇಶ, ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ನಿತ್ಯನೈಮಿತ್ಯಾದಿಗಳ ನಿರ್ಣಯ ನಡೆಯಲಿದೆ. ಬೆಳಿಗ್ಗೆ 11:30 ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು.
- Thursday
- November 21st, 2024