ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಯು 13-06-1998ರಲ್ಲಿ ಸ್ಥಾಪನೆಗೊಂಡು ಪ್ರಸ್ತುತ 25 ವರ್ಷ ಪೂರೈಸಿದ ಸವಿನೆನಪಿಗಾಗಿ ಈ ದಿನ ಬೆಳ್ಳಿ ಹಬ್ಬ ಸಂಭ್ರಮ ನಡೆಯುತ್ತಿದ್ದು ಇದರ ಅಂಗವಾಗಿ ಪೂರ್ವಾಹ್ನ 9.45. ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶ್ರೀಧರ ಗೌಡ.ಕೆ ಅಧ್ಯಕ್ಷರು ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲೋಚನಾ.ದೇವ ಅಧ್ಯಕ್ಷರು ಗ್ರಾಮ ಪಂಚಾಯತ್ ದೇವಚಳ್ಳ ವಹಿಸಿದ್ದರು, ಮುಖ್ಯ ಅತಿಥಿಯಾಗಿ,ನಳಿನಿ.ಕೆ ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ. ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ,ಸದಸ್ಯರು,ಲೀಲಾವತಿ ಸೇವಾಜೆ, ಪ್ರೇಮಲತಾ ಕೇರ, ನಾಗವೇಣಿ ಸದಸ್ಯರು ಗ್ರಾಮ ಪಂಚಾಯತ್ ಮರ್ಕಂಜ, ಸಂತೋಷ್ ಸಮೂಹ ಸಂಪನ್ಮೂಲ ವ್ಯಕ್ತಿ, ದೇವಚಳ್ಳ ಇವರು ಬಹುಮಾನ ವಿತರಿಸಿದರು.ಗೌರವ ಉಪಸ್ಥಿತಿಯಲ್ಲಿ ಮುರಳೀಕೃಷ್ಣ ನಂದಗೋಕುಲ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ, ದೇವಿಪ್ರಸಾದ್ ಅಧ್ಯಕ್ಷರು ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು,ಜಯದೀಪ್ ಕರಂಗಿಲಡ್ಕ, ಅಧ್ಯಕ್ಷರು ಶ್ರೀ ಕೃಷ್ಣ ಸಾಂ.ಸಂ.ಸೇವಾಜೆ, ಪೂರ್ಣಿಮಾ.ಎಂ ಅಧ್ಯಕ್ಷರು ಬಾಲವಿಕಾಸ ಸಮಿತಿ ಸೇವಾಜೆ ಅಂಗನವಾಡಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ರಕ್ಷಿತ್ ಪಟ್ಟೆ ವಂದಿಸಿದರು, ಮುರಳೀಧರ ಪುನ್ಕಟ್ಟಿ ಹಾಗೂ ಪದ್ಮನಾಭ ಸೇವಾಜೆ ಕಾರ್ಯಕ್ರಮ ನಿರೂಪಿಸಿದರು.
ಇಂದು ಸಂಜೆ 5.30 ರಿಂದ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸೇವಾಜೆ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ, ನಿವೃತ್ತ ಶಿಕ್ಷಕಿ ಪ್ರೇಮಲತಾ.ಎಸ್ ಇವರಿಗೆ ಸನ್ಮಾನ ತದನಂತರ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತುಳು ಹಾಸ್ಯಮಯ ಯಕ್ಷಗಾನ ಕಾರಿಂಜೆ ಕೇಂಜಾವೆ ನಡಯಲ್ಲಿದೆ.