ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಬಾಲಭವನ ಸಮಿತಿ ಸುಳ್ಯ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ ಸುಳ್ಯ ದ.ಕ. ಸ್ವರ ಮಾಧುರ್ಯ ಬಳಗ ಪುತ್ತೂರು ದ.ಕ. ವತಿಯಿಂದ ಸುಳ್ಯ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಒಂದು ವಾರ ನಡೆದ ಅರಳು ಮಲ್ಲಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ.26ರಂದು ನಡೆಯಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಉತ್ತಮವಾದ ಶಿಕ್ಷಣ ಅವರ ತಲೆಯಲ್ಲಿ ಒಗ್ಗಿಕೊಂಡು ಶಾಶ್ವತವಾಗಿ ಉಳಿಯಲಿದೆ. ಮಕ್ಕಳುಗೆ ಇಷ್ಟವಾಗುವ ಶಿಕ್ಷಣವನ್ನು ಹೆತ್ತವರು ನೀಡಬೇಕು. ಯಾವುದೇ ಒತ್ತಡದ ಶಿಕ್ಷಣ ನೀಡಬಾರದು ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ರಶ್ಮಿ ಎನ್. ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕಿ ದೀಪಿಕಾ ಸ್ವಾಗತಿಸಿದರು. ಇಲಾಖೆಯ ವತಿಯಿಂದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಬಿರಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಮೇ.20ರಿಂದ ಮೇ.27ರ ವರೆಗೆ 5ರಿಂದ 16 ವರ್ಷದೊಳಗಿನ ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಬೇಸಿಗೆ ಶಿಬಿರ ಇದಾಗಿದೆ.
ಕಾರ್ಯಕ್ರಮ ಮಾ| ಲೋಹಿತ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಮೇಲ್ವಿಚಾರಕಿ ದೀಪಿಕಾ ಸ್ವಾಗತಿಸಿ, ಶ್ರೀಮತಿ ರವಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.