ಮೇ.24ರಂದು ಸುಳ್ಯದ ನಗರ ಪಂಚಾಯತ್ ನಲ್ಲಿ ಡಿ.ಯಂ ಶಾರಿಖ್ ನವರು ಈ ಹಿಂದೆ ಲೋಕಾಯುಕ್ತಕ್ಕೆ 2019ನೇ ಇಸವಿಯಲ್ಲಿ ನೀಡಿದ ದೂರಿನ ಕುರಿತು ದ. ಕ ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಗಳೂರು ಇದರ ಯೋಜನಾ ನಿರ್ದೇಶಕರ ಸೂಚನೆ ಮೇರೆಗೆ (ಲೋಕಾಯುಕ್ತ ಅಧಿಕಾರಿಗಳ ಸೂಚನೆ ಪ್ರಕಾರ) ಕಾರ್ಯನಿರ್ವಹಕ ಇಂಜಿನಿಯರ್ ಶ್ರೀ ಅರುಣ್ ಕುಮಾರ್ ತನಿಖೆ ನಡೆಸಿದ್ದು ಪಂಚಾಯಿತ್ ನ ಮುಂಭಾಗದಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸಿದ್ದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು.
ಒಳಚರಂಡಿಯನ್ನು ದುರಸ್ತಿಪಡಿಸಿ ಸಾರ್ವಜನಿಕ ಸೇವೆಗೆ ಒದಗಿಸಲು ಯೋಜನೆ ರೂಪಿಸಲಾಗುತ್ತದೆಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಒಳಾಂಗಣ ಕ್ರೀಡಾಂಗಣದಲ್ಲಿ ಬಡವರಿಗೆ ಮತ್ತು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ನಿಶುಲ್ಕವಾಗಿ ಆಟವಾಡಲು ವ್ಯವಸ್ಥೆ ರೂಪಿಸಲಾಗುವುದುದೆಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಡಿ.ಯಂ ಶಾರಿಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Thursday
- November 21st, 2024