- Wednesday
- April 2nd, 2025

ಮಳೆಗಾಲ ಆರಂಭಗೊಳ್ಳುತ್ತಿದ್ದು, ಇದರಿಂದ ಉಂಟಾಗುವ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಬುಧವಾರ ಸುಳ್ಯ ತಹಶೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್ ಉಪಸ್ಥಿತರಿದ್ದರು.ಪ್ರಾಕೃತಿಕ ವಿಕೋಪ ಸಂಭವಿಸಿದರೆ ತಕ್ಷಣ ಕ್ರಮ ಕೈಗೊಳ್ಳಲು ಗ್ರಾಮ ಲೆಕ್ಕಾಧಿಕಾರಿಗಳು...

ಸುಳ್ಯ: ಅಜ್ಜಾವರ ಗ್ರಾಮದ ಮಾರ್ಗ ಮನೆ ರಾಮಚಂದ್ರ ಎಂಬವರ ಪತ್ನಿ ಅನಿತಾ (40)ಎಂಬವರು ತಮ್ಮ ತೋಟಕ್ಕೆ ಹೋಗಿದ್ದಾಗ ಅಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ರಾಮಚಂದ್ರರು ಬೆಳಗ್ಗೆ ಸುಳ್ಯಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಮಧ್ಯಾಹ್ನ ಮನೆಗೆ ಹೋದಾಗ ಪತ್ನಿ ಮನೆಯಲ್ಲಿ ಕಾಣಿಸಲಿಲ್ಲ. ತೋಟಕ್ಕೆ ಹೋಗಿರಬಹುದೆಂದು ಅವರನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ...

ಪಂಜದ ಅಳ್ಪೆ ನಾಯರ್ ಕೆರೆ ಕುಟುಂಬದ ನಾಗನಕಟ್ಟೆಯಲ್ಲಿ ನಾಗಬ್ರಹ್ಮ,ನಾಗಕನ್ನಿಕೆ, ನಾಗರಾಜ,ಒಂಟಿ ನಾಗರ ದೇವರುಗಳ ಪ್ರತಿಷ್ಠೆಯು ಅರ್ಚಕ ರಘುರಾಮ ಆಮ್ಮಣ್ಣಾಯ ರವರ ನೇತೃತ್ವದಲ್ಲಿ ಮೇ.24ರಂದು ಜರುಗಿತು.ಮೇ.20 ರಂದು ಆರಂಭಗೊಂಡು ಸರ್ಪಸಂಸ್ಕಾರ , ಆಶ್ಲೇಷ ಬಲಿ, ಗಣಹೋಮ ಮೊದಲಾದ ವೈಧಿಕ ಕಾರ್ಯಕ್ರಮಗಳು ಜರುಗಿತು.ಕುಟುಂಬಸ್ಥರು, ನೆಂಟರಿಷ್ಟರು, ಊರವರು ಉಪಸ್ಥಿತರಿದ್ದ

ನೂತನ ವಿಧಾನಸಭಾ ಸ್ಪೀಕರ್ ಆಗಿ ಯು.ಟಿ. ಖಾದರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಭಾಧ್ಯಕ್ಷ ಪೀಠವನ್ನು ಅಲಂಕರಿಸಿದ್ದಾರೆ.ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯು.ಟಿ. ಖಾದರ್ ಅವರ ಹೆಸರನ್ನು ಸದನದಲ್ಲಿಂದು ಸೂಚಿಸಿದರು. ಬಳಿಕ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಖಾದರ್ ಹೆಸರನ್ನು ಅನುಮೋದಿಸಿದರು. ನಂತರ ಬಹುಮತದ ಮೂಲಕ ಖಾದರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದ...