ನೂತನ ಮುಖ್ಯಮಂತ್ರಿಯಾಗಿ ವಹಿಸಿಕೊಂಡ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದಿಸಿ ಹಾಕಲಾಗಿದ್ದ ಬ್ಯಾನರ್ ಗೆ ಬೆಂಕಿ ಹಾಕಿದ ಘಟನೆ ವಳಲಂಬೆಯಲ್ಲಿ ನಡೆದಿದೆ.
ಮೇ.20 ರಂದು ವಳಲಂಬೆ ಹಾಗೂ ಪೈಕ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಹಾಕಿದ್ದ ಬ್ಯಾನರ್ ಗೆ ಅಂದೇ ರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Thursday
- November 21st, 2024