Ad Widget

ಕೊಲ್ಲಮೊಗ್ರ : ಸಾರ್ವಜನಿಕ ಆಸ್ತಿಗೆ ಹಾನಿ, ಕ್ರಮ ಕೈಗೊಳ್ಳಲು ಊರವರ ಒತ್ತಾಯ

ಕೊಲ್ಲಮೊಗ್ರದ ಹಾಲಿನ ಡೈರಿ‌ ಹಾಗೂ ಪಶು ಆಸ್ಪತ್ರೆಯ ತಡೆಗೋಡೆಗೆ ಕಾಂಕ್ರೀಟ್ ಮಿಕ್ಸಿಂಗ್ ವಾಹನ ಗುದ್ದಿದ ಪರಿಣಾಮ ತಡೆಗೋಡೆ ಕುಸಿದ ಘಟನೆ ನಡೆದಿದೆ.‌ ಈ ಹಿಂದೆ ರಸ್ತೆ ಕಾಮಗಾರಿ ನಡೆಸಲು ಬಂದ ಮಿಲನ್ ಸಂಸ್ಥೆ ಗೆ ಸೇರಿದ ಅಜೆಕ್ಸ್ ವಾಹನವು ತಡೆಗೋಡೆಗೆ ಗುದ್ದಿ ಎರಡು ಕಡೆ ಹಾನಿಗೊಳಿಸಿದ್ದರೆನ್ನಲಾಗಿದ್ದು, ಇದನ್ನು ಗ್ರಾಮಸ್ಥರು ಹಲವು ಸಲ ಪ್ರಶ್ನಿಸಿದ್ದರೂ ಯಾವುದೇ ರೀತಿಯ ಸ್ಪಂದನೆ ನೀಡದೇ ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ವಾಹನ ಗುದ್ದಿ ಬಿರುಕು ಬಿಟ್ಟ ತಡೆಗೋಡೆ ಕುಸಿದಿದೆ. ಈ ಬಗ್ಗೆ ಪಂಚಾಯತ್ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿ ಗೆ ಹಾನಿ ಮಾಡಿರುವುದು ಗೊತ್ತದರೂ ಇದರ ಬಗ್ಗೆ ಯಾರು ಕ್ರಮ ಕೈಗೊಳ್ಳದೇ ಇರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!