Ad Widget

ಮೇ.21-22: ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ

ಕಾಯರ್ತೋಡಿ ವಿಷ್ಣುನಗರ ಸೂರ್ತಿಲದಲ್ಲಿ ಶ್ರೀ ರಕ್ತೇಶ್ವರಿ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮೇ.21ರಿಂದ 22ರ ತನಕ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಡಿ.ವಿ ಲೀಲಾಧರ್‌ರವರು ಮೆ.11ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಎ.೧೮ರಂದು ಸಂಜೆ 6 ಗಂಟೆಗೆ ಸುದರ್ಶನ ಹೋಮ, ಅನ್ನಸಂಪರ್ತಣೆ ನಡೆಯಲಿದ್ದು, ಎ.21ರಂದು ಬೆಳಗ್ಗೆ 9.30ಕ್ಕೆ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು, ಸಂಜೆ 3 ಗಂಟೆಗೆ ವಿವಿಧ ಭಜನಾ ಮಂಡಳಿಯವರ ವತಿಯಿಂದ ಭಜನಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ತಂತ್ರಿಗಳ ಆಗಮನ, ರಾತ್ರಿ 7ಕ್ಕೆ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಎ.22ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ಬ್ರಹ್ಮಕಲಶಪೂಜೆ, ಬೆಳಗ್ಗೆ 7.44ಕ್ಕೆ ಮಿಥುನ ಲಗ್ನ ಸುಮಹೂರ್ತದಲ್ಲಿ ಪತ್ರಿಷ್ಠೆ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ, ನಡೆಯಲಿದ್ದು, ಬೆಳಗ್ಗೆ 11ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ಅನ್ನಸಂಪರ್ತಣೆ, ಸಂಜೆ 6ಕ್ಕೆ ಶ್ರೀ ರಕ್ತೇಶ್ವರಿ ದೈವದ ತೊಡಂಙಲ್, 6.30ರಿಂದ ತೆಲಿಕೆದ ಬೊಳ್ಳಿ ಡಾ| ದೇವದಾಸ್ ಕಾಪಿಕಾಡ್, ಬೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್ ನಟಿಸಲಿರುವ ನೂತನ ಹಾಸ್ಯಮಯ ನಾಟಕ ನಡೆಯಲಿದೆ. ನಂತರ ಅನ್ನಸಂಪರ್ತಣೆ, ರಾತ್ರಿ 9.30ಕ್ಕೆ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ಹೇಳಿದರು.
ಎ.22ರಂದು ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಡಿ.ವಿ ಲೀಲಾಧರ್ ವಹಿಸಲಿದ್ದಾರೆ. ಆಶೀರ್ವಚನವನ್ನು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ್ ತಂತ್ರಿವರ್ಯರು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ| ಆರ್.ಕೆ ನಾಯರ್, ನಗರ ಪಂಚಾಯತ್ ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಪ್ರವಿತಾ ಪ್ರಶಾಂತ್ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್, ಉಪಾಧ್ಯಕ್ಷ ಗೋಕುಲ್ ದಾಸ್, ಗೌರವ ಸಲಹೆಗಾರರಾದ ಎನ್.ಎ ರಾಮಚಂದ್ರ, ವೆಂಕಪ್ಪ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಉಪಾಧ್ಯಕ್ಷ ಗಣೇಶ್ ಆಳ್ವ, ಸೇವಾ ಸಮಿತಿ ಅಧ್ಯಕ್ಷ ಶಶಿಧರ ಪಡ್ಪು, ಉಪಾಧ್ಯಕ್ಷ ಡಿ.ಎಸ್ ಗಿರೀಶ್, ಕೋಶಾಧಿಕಾರಿ ಕೃಷ್ಣ ಬೆಟ್ಟ, ಸಮಿತಿ ಸದಸ್ಯರಾದ ರಾಜು ಪಂಡಿತ್ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading