Ad Widget

ಮೇ.12 : ಪುಳಿಕುಕ್ಕು ಗಿರಿಯಮಜಲು ಕುಟುಂಬದ ತರವಾಡು ಮನೆ ಗೃಹಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠೆ

ಪುಳಿಕುಕ್ಕು ಗಿರಿಯಮಜಲು ಕುಟುಂಬದ ತರವಾಡು ಮನೆ ಗೃಹಪ್ರವೇಶ ಹಾಗೂ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಮೇ. 12 ರಂದು ಬೆಳಗ್ಗೆ ಗಂಟೆ 7.17ರಿಂದ 8 26ರ ವರೆಗಿನ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ನಡೆಯಲಿದೆ. ತರವಾಡು ಗೃಹಪ್ರವೇಶ, ಶ್ರೀ ರುದ್ರಚಾಮುಂಡಿ, ಶ್ರೀ ರಕ್ತೇಶ್ವರಿ, ಮಹಿಷಾಂತಾಯ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಮೇ 11ರಂದು ಗುರುವಾರ ಸಂಜೆ ಗಂಟೆ 7:00 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ಪೂಜಾ ಬಲಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮೇ. 12 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 6:00 ರಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ತರವಾಡು ಮನೆಯ ಗೃಹಪ್ರವೇಶ, ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಪುಳಿಕುಕ್ಕು ಗಿರಿಯಮಜಲು ಕುಟುಂಬದ ದೈವ ದೇವರುಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷರಾದ ಕುಶಾಲಪ್ಪ ಗೌಡ ಹೊಳೆಕೆರೆ, ಉಪಾಧ್ಯಕ್ಷರಾದ ಮೋನಪ್ಪ ಗೌಡ ಗಿರಿಯಮಜಲು, ಕಾರ್ಯದರ್ಶಿ ಪುರುಷೋತ್ತಮ ಗೌಡ ಗಿರಿಯಮಜಲು, ಕೋಶಾಧಿಕಾರಿ ಮೋಹನ ಪಿ ಪೊಯ್ಯೆಮಜಲು, ಜತೆ ಕಾರ್ಯದರ್ಶಿ ಪದ್ಮನಾಭ ಪಿ ಪುಣ್ಚತ್ತಾಡಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading