Ad Widget

ಮೂರು ಹೊತ್ತು ಪಲಾವ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಚುನಾವಣಾ ಸಿಬ್ಬಂದಿಗಳು – ಕೆಲವೆಡೆ ಅದೂ ವಿಳಂಬ

ಸುಳ್ಯ ವಿಧಾನಸಭಾ ಕ್ಷೇತ್ರದ 231 ಬೂತ್ ಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಮೇ.9 ರಂದು ಬೂತ್ ಗಳಿಗೆ ಆಗಮಿಸಿದ ಸಿಬ್ಬಂದಿಗಳು ಮೇ.10 ರಂದು ಬೆಳಿಗ್ಗೆಯಿಂದ ಸಂಜೆಯ ತನಕ ಚುನಾವಣಾ ಕೆಲಸದಲ್ಲಿ ನಿರತರಾಗಿದ್ದರು. ಆದರೇ ಈ ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ನಾವು ಮೂರು ಹೊತ್ತು ಪಲಾವ್ ತಿನ್ನುವಂತಾಗಿದೆ ಎಂದು ಸಿಬ್ಬಂದಿಗಳು ನೋವು ತೋಡಿಕೊಂಡಿದ್ದಾರೆ. ಕೆಲ ಕಡೆಗಳಲ್ಲಿ ಆಹಾರ ತರಲು ವಿಳಂಬವಾಗಿದ್ದರಿಂದ ಹಸಿವಿನಿಂದ ಬಳಲುವಂತಾಗಿತ್ತು. ಮುಂದಿನ ಚುನಾವಣೆಗಳಲ್ಲಾದರೂ ಆಯೋಗ ಸಿಬ್ಬಂದಿಗಳಿಗೆ ಸರಿಯಾದ ಊಟದ ವ್ಯವಸ್ಥೆ ಮಾಡುವುದು ಒಳಿತು. ಕೆಲವೆಡೆ ಮತಯಂತ್ರ ಕೈಕೊಟ್ಟು ಸಿಬ್ಬಂದಿಗಳು ಚಡಪಡಿಸಿದ ಘಟನೆ ನಡೆಯಿತು. ಕೆಲವೆಡೆ ಸಂಜೆ ವೇಳೆಗೆ ಮಳೆ ಬಂದು ವಿದ್ಯುತ್ ಕೈಕೊಟ್ಟಿದ್ದರಿಂದ ಕತ್ತಲೆಯಲ್ಲಿ ಮತದಾನ ಮಾಡುವಂತಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading